ಕೊಲೆ ಪ್ರಕರಣ ಭೇದಿಸಿದ ಪೊಲೀಸರು, ಪತ್ನಿಯೇ ಕೊಲೆಗಾರ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Murder--01

ತುಮಕೂರು, ನ.14- ಕಿಬ್ಬನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆಸಿದ್ದ ಗಂಗಾಧರಯ್ಯ ಎಂಬವರ ಕೊಲೆ ಪ್ರಕರಣವನ್ನು ಭೇದಿಸಿರುವ ತಿಪಟೂರು ಉಪವಿಭಾಗದ ಪೊಲೀಸರು, ಮೃತರ ಪತ್ನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿಯ ಸೋಮನಹಳ್ಳಿ ನಿವಾಸಿ ಶಾಂತಮ್ಮ (40), ಗುಬ್ಬಿ ತಾಲೂಕಿನ ಅಡಗೂರು ನಿವಾಸಿಗಳಾದ ಎ.ಎನ್.ಮಂಜುನಾಥ್ (22), ಎ.ಎಚ್.ಕೃಷ್ಣ (23) ಹಾಗೂ ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿಯ ರಾಮಡಿಹಳ್ಳಿ ನಿವಾಸಿ ವ.ಜ್ಞಾನೇಶ್ ಅಲಿಯಾಸ್ ಜ್ಞಾನಿ (23) ಬಂಧಿತ ಆರೋಪಿಗಳು.

ಕಿಬ್ಬನಹಳ್ಳಿಯ ಗಂಗಾಧರಯ್ಯ ಎಂಬವರನ್ನು ಕಳೆದ ಸೋಮವಾರ ಆರೋಪಿಗಳು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಮೃತದ ಸಂಬಂಧಿ ಸಂದೀಪ್ ಎಂಬವರು ಕಿಬ್ಬನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಗಳ ಪತ್ತೆಗಾಗಿ ತಿಪಟೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬಿ.ಎಲ್.ವೇಣುಗೋಪಾಲ್ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.

ಈ ತಂಡ ತನಿಖೆ ಕೈಗೊಂಡಾಗ ಮೃತ ಗಂಗಾಧರಯ್ಯ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು. ದುಡಿದ ಸಂಪಾದನೆಯೆಲ್ಲಾ ಮಹಿಳೆಗಾಗಿ ಖರ್ಚು ಮಾಡುತ್ತಿದ್ದರು. ಇದರಿಂದ ಪತ್ನಿ ಶಾಂತಮ್ಮ ಇತರ ಆರೋಪಿಗಳೊಂದಿಗೆ ಸೇರಿ ಗಂಗಾಧರಯ್ಯ ಅವರನ್ನು ಕೊಲೆ ಮಾಡಿ ಅಯ್ಯನಪಾಳ್ಯಕ್ಕೆ ಹೋಗುವ ರಸ್ತೆ ಬದಿಯಲ್ಲಿ ಶವವನ್ನು ಎಸೆದು ಪರಾರಿಯಾಗಿದ್ದರು ಎಂಬುದು ತಿಳಿದುಬಂದಿದೆ.

ತಿಪಟೂರು ಗ್ರಾಮಾಂತರ ವೃತ್ತದ ಸಿಪಿಐ ಜಿ.ಕೃಷ್ಣರಾಜು, ಕಿಬ್ಬನಹಳ್ಳಿ ಪೊಲೀಸ್ ಠಾಣೆಯ ಪಿಎಸ್‍ಐ ರಾಮಪ್ರಸಾದ್, ಎಎಸ್‍ಯ ನಾಗರಾಜು, ಸಿಬ್ಬಂದಿ ರುದ್ರೇಶ್, ಮಧುಸೂದನ್, ಗೋಪಾಲ್, ಶಾಂತಕುಮಾರ್, ರಾಜೇಶ್, ರಮೇಶ್ ಹಾಗೂ ನಾಗಭೂಷಣ್ ಈ ವಿಶೇಷ ತಂಡದಲ್ಲಿದ್ದರು. ಈ ತಂಡದ ಕಾರ್ಯಾಚರಣೆಯನ್ನು ಪೊಲೀಸ್ ಅಧೀಕ್ಷಕರಾದ ಡಾ.ದಿವ್ಯ ವಿ.ಗೋಪಿನಾಥ್ ಪ್ರಶಂಸಿಸಿದ್ದಾರೆ.

Facebook Comments

Sri Raghav

Admin