ಕೊನೆಗೂ ರಣವೀರ್ – ದೀಪಿಕಾ ಮದುವೆ ಫೋಟೋಸ್ ಔಟ್..!

ಈ ಸುದ್ದಿಯನ್ನು ಶೇರ್ ಮಾಡಿ

Ranveer--01

ಬೆಂಗಳೂರು. ನ.15 : ಬಾಲಿವುಡ್ ಖ್ಯಾತ ತಾರೆಯರಾದ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಅವರು ಬುಧವಾರ ಕೊಂಕಣಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸಿಂಧಿ ಶೈಲಿಯ ಮದುಮಕ್ಕಳಾಗಿ ಮಿಂಚಿದ ಫೋಟೋ ಗುರುವಾರ ಬಹಿರಂಗವಾಗಿದೆ. ಇಟಲಿಯ ಸುಂದರ ಪ್ರವಾಸಿ ತಾಣ ಲೇಕ್ ಕೊಮೊವಿನ ವಿಲ್ಲಾ ಡೆಲ್ ಬಲ್ಬಿಯಾನೆಲ್ಲೊದಲ್ಲಿ ಡೀಪ್‍ವೀರ್ ಮದುವೆಯಾಗಿದ್ದು, ಅವರ ಮದುವೆ ಫೋಟೋಗಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಹಲವು ಅಭಿಮಾನಿಗಳು ಜಾತಕಪಕ್ಷಿಯಂತೆ ಕಾಯುತ್ತಿದ್ದರು.

ದೀಪಿಕಾ ಪಡುಕೋಣೆ ಮತ್ತು ರಣ್ ವೀರ್ ಸಿಂಗ್ ಇಬ್ಬರು ತಮ್ಮ ವಿವಾಹ ಸಂಭ್ರಮದ ಚಿತ್ರಗಳನ್ನು ಇಂದು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, ಅಂತೂ,ಇಂತೂ ವರ್ಷಗಟ್ಟಲೇ ಚರ್ಚೆ ಮತ್ತು ನಿರೀಕ್ಷೆಗೆ ಕಾರಣವಾಗಿದ್ದ ಡೀಪ್ ವೀರ್ ಜೋಡಿಯ ಮದುವೆ ನಡೆದಿದೆ. ಇಟಲಿಯ ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾಯುತ್ತಿರುವ ಅವರ ಅಭಿಮಾನಿಗಳನ್ನು ನಿರಾಶೆಗೊಳಿಸಬಾರದು ಎಂಬ ಉದ್ದೇಶದಿಂದ ನವ ದಂಪತಿ ಆಯ್ದ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

ಡೀಪ್- ವೀರ ವಿವಾಹ ಕಾರ್ಯಕ್ರಮ ಉತ್ತರ ಇಟಲಿಯ ನಯನ ಮನೋಹರ ಕೊಮೊ ಸರೋವರ ತೀರದಲ್ಲಿ ನಡೆಯಿತು. ರೋಮ್ ಚಕ್ರಾಧಿಪತ್ಯದ ಭವ್ಯ ಪರಂಪರೆಯ ಹಿನ್ನೆಲೆ ಹೊಂದಿರುವ ಇಟಲಿಯಲ್ಲಿ ಬಿ ಟೌನ್‍ನ ಜನಪ್ರಿಯ ತಾರಾಜೋಡಿಯ ವಿವಾಹ ಕರ್ನಾಟಕ ಶೈಲಿಯಲ್ಲಿ ನಡೆದಿರುವುದು ಗಮನಾರ್ಹ. ವರ್ಷದ ಬಹುನಿರೀಕ್ಷಿತ ಈ ವಿವಾಹ ಸಂಭ್ರಮದಲ್ಲಿ ಉಭಯ ಕುಟುಂಬ ಸದಸ್ಯರು, ನಟ ಶಾರುಖ್ ಖಾನ್, ನಿರ್ದೇಶಕಿ ಫರ್ಹಾಖಾನ್, ನಿರ್ದೇಶಕ ಸಂಜಯ ಲೀಲಾ ಬನ್ಸಾಲಿ ಸೇರಿದಂತೆ ಕೆಲವೇ ಕೆಲವು ಆಪ್ತರಿಗೆ ಆಮಂತ್ರಣ ನೀಡಲಾಗಿತ್ತು. ವಿವಾಹ ಕಾರ್ಯಕ್ರಮವು 800 ವರ್ಷ ಇತಿಹಾಸ ಹೊಂದಿರುವ ವಿಲ್ಲಾ ಡೆಲ್ ಬಾಲ್ ಬಿಯಾನೆಲ್ಲೋದಲ್ಲಿ ನಡೆಯಿತು.

ಕುಟುಂಬ ಸದಸ್ಯರಿಗಾಗಿ ದೀಪಿಕಾ ಕುಟುಂಬ ನ.21ರಂದು ಬೆಂಗಳೂರಿನ ಹೋಟೆಲ್ ಲೀಲಾ ಪ್ಯಾಲೆಸ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದೆ. ಇನ್ನು ಮದುವೆ ದಿಬ್ಬಣಕ್ಕಾಗಿ ವಿಶೇಷ ಕೇಕ್ ತಯಾರಿಸಲು ಸ್ವಿಡ್ಜರ್‍ಲ್ಯಾಂಡ್‍ನಿಂದ ವಿಶೇಷ ಬಾಣಸಿಗರನ್ನು ಕರೆಸಲಾಗಿದೆ. ಇದೇ ವೇಳೆ ತಮ್ಮ ವಿವಾಹಕ್ಕೆ ಉಡುಗೊರೆ ನೀಡಬಯಸುವವರು ದತ್ತಿ ಸಂಸ್ಥೆಗಳಿಗೆ ದಾನ ಮಾಡಬಹುದು ಎಂದು ದೀಪಿಕಾ-ರಣವೀರ್ ದಂಪತಿ ಕೋರಿದ್ದಾರೆ.

RanveerWedsDeepika 01 RanveerWedsDeepika 02 RanveerWedsDeepika 03 RanveerWedsDeepika 03b RanveerWedsDeepika 04 RanveerWedsDeepika 05

Facebook Comments