ನೀನಾಸಂ ಅಶ್ವಥ್ ವಿರುದ್ಧ ವಂಚನೆ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

nenasamಬೆಂಗಳೂರು,ನ.15- ಫಾರ್ಮ್ ಹೌಸ್ ಮಾಡಲು ನೀನಾಸಂ ಅಶ್ವಥ್ ಅವರು ತನ್ನಿಂದ 18 ಲಕ್ಷ ಹಣ ಪಡೆದು ವಂಚಿಸಿದ್ದಾರೆ ಎಂದು ಅವರ ವಿರುದ್ದ ಆತನ ಗೆಳೆಯ ರಜತ್ ದ್ವಾರಕ ಎಂಬುವರು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

ಅಶ್ವಥ್ ನೀನಾಸಂ ಅವರು ಫಿಲ್ಮ್ ಇನ್‍ಸ್ಟಿಟ್ಯೂನಲ್ಲಿ ಪರಿಚಯವಾಗಿತ್ತು. ಮಂಡ್ಯ ಬಳಿ ಫಾರ್ಮ್ ಹೌಸ್ ಮಾಡಲು ತಮ್ಮಿಂದ ಅಶ್ವಥ್ ಹಣ ಪಡೆದಿದ್ದರು. ಈಗ ಹಣ ನೀಡದೆ ತಮಗೆ ಸತಾಯಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಶ್ವಥ್ ಅವರು, ನಾನು ಈಗಾಗಲೇ ಸಾಲದ ಹಣವನ್ನು ವಾಪಸ್ ನೀಡಿದ್ದೇನೆ. ಇದರ ಬಗ್ಗೆ ನನ್ನ ಬಳಿ ದಾಖಲೆ ಇದೆ ಎಂದು ಹೇಳಿದ್ದಾರೆ. ಈ ಪ್ರಕರಣ ಸಂಬಂಧಿಸದಂತೆ ದ್ವಾರಕ್‍ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರು ತಿಳಿಸಿದ್ದಾರೆ.

Facebook Comments