ನ.19ರ ಸಭೆಗೂ ಮುನ್ನ ಸಮಸ್ಯೆ ಇತ್ಯರ್ಥಕ್ಕೆ ಮುಂದಾದ ಆರ್‌ಬಿಐ ಗೌರ್ನರ್

ಈ ಸುದ್ದಿಯನ್ನು ಶೇರ್ ಮಾಡಿ

rbi-Urjit-Patel
ನವದೆಹಲಿ,ನ.15- ಕಳೆದ ಹಲವು ದಿನಗಳಿಂದ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ನಡುವೆ ನಡೆಯುತ್ತಿದ್ದ ಸಂಘರ್ಷ ನವೆಂಬರ್ 19ರಂದು ನಡೆಯುವ ಕೇಂದ್ರೀಯ ಬ್ಯಾಂಕ್ ನಿರ್ದೇಶಕ ಮಂಡಳಿ ಸಭೆಗೂ ಮುನ್ನವೇ ಇತ್ಯಥಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.

ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಆರ್‍ಬಿಐ ಗೌರ್ನರ್ ಊರ್ಜಿತ್ ಪಟೇಲ್ ಮುಂದಾಗಿದ್ದಾರೆ. ಸರ್ಕಾರಿ ಸ್ವಾಮ್ಯದ ನಷ್ಟಪೀಡಿತ 11 ಬ್ಯಾಂಕ್‍ಗಳ ವಿರುದ್ಧ ವಿಧಿಸಿರುವ ನಿರ್ಬಂಧಿತ ಕಠಿಣ ಕ್ರಮಗಳನ್ನು ಮತ್ತು ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ(ಎಂಎಸ್ ಎಂಇ) ಸಾಲ ನೀಡಿಕೆಯ ನಿಯಮಗಳನ್ನು ಸಡಿಲಗೊಳಿಸಲು ಆರ್ ಬಿಐ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ಎಂಎಸ್‍ಎಂಇ ವಲಯಕ್ಕೆ ಸಾಲ ನೀಡಿಕೆಯು ಸರಳೀಕರಣಗೊಳ್ಳಲಿದೆ. ಹಣಕಾಸಿನ ಕೊರತೆ ಎದುರಿಸುತ್ತಿರುವ ಎಂಎಸ್‍ಎಂಇ ಕಂಪನಿಗಳು ಹಾಗೂ ಬ್ಯಾಂಕಿಂಗ್ ಹೊರತುಪಡಿಸಿದ ಹಣಕಾಸು ಕಂಪನಿಗಳಿಗೆ ವಿಶೇಷ ವಿನಾಯಿತಿ ನೀಡುವ ಬಗ್ಗೆಯೂ ರಿಸರ್ವ್ ಬ್ಯಾಂಕ್ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಹಣಕಾಸು ಸಚಿವಾಲಯ, ಆರ್ ಬಿಐ ಹಾಗೂ ಪ್ರಧಾನಿ ಕಚೇರಿ ನಿರಾಕರಿಸಿದೆ.

Facebook Comments

Sri Raghav

Admin