ಬೆಂಕಿಹಚ್ಚಿ ಕರಡಿಯನ್ನು ಓಡಿಸಿದ ಗ್ರಾಮಸ್ಥರು

ಈ ಸುದ್ದಿಯನ್ನು ಶೇರ್ ಮಾಡಿ

bearಚಿತ್ರದುರ್ಗ, ನ.15- ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಜಾಂಬವಂತ ಗ್ರಾಮಸ್ಥರ ಗಲಾಟೆಗೆ ಹೆದರಿ ಮರವೇರಿ ಕುಳಿತರೂ ಸಹ ಅದನ್ನು ಸುಮ್ಮನೆ ಬಿಡದ ಜನರು ಬೆಂಕಿ ಇಟ್ಟು ಕಾಡಿಗೆ ಓಡಿಸಿರುವ ಘಟನೆ ಹೊಳಲ್ಕೆರೆ ತಾಲ್ಲೂಕಿನ ಹಿರೇಹೆಮ್ಮಿಗನೂರು ಗ್ರಾಮದಲ್ಲಿ ನಡೆದಿದೆ. ಆಹಾರವನ್ನು ಹುಡುಕುತ್ತಾ ದಾರಿ ತಪ್ಪಿ ಗ್ರಾಮಕ್ಕೆ ನುಗ್ಗಿದ ಕರಡಿಯನ್ನು ಕಂಡ ಗ್ರಾಮಸ್ಥರು ಗಲಾಟೆ ಮಾಡಿದ್ದರಿಂದ ಭಯಭೀತಗೊಂಡ ಕರಡಿ ಗ್ರಾಮದ ಸಮೀಪವಿರುವ ಮರವನ್ನೇರಿ ಕುಳಿತಿದೆ.

ಅಷ್ಟಕ್ಕೆ ಸುಮ್ಮನಾಗದೆ ಗ್ರಾಮಸ್ಥರು ಮರದ ಬುಡಕ್ಕೆ ತೆಂಗಿನ ಗರಿಗಳಿಂದ ಬೆಂಕಿ ಇಟ್ಟು ಜತೆಗೆ ಕೋಲಿಗೆ ಬೆಂಕಿ ಹಚ್ಚಿ ಕರಡಿಗೆ ತಿವಿದಿದ್ದಾರೆ. ಇದರಿಂದ ಬೆಚ್ಚಿದ ಕರಡಿ ಅಲ್ಲಿ ತಪ್ಪಿಸಿಕೊಳ್ಳಲು ಪ್ರಯಾಸಪಟ್ಟು ಕೆಳಗೆ ಬಿದ್ದು ಅಲ್ಲಿಂದ ಅದೇಗೋ ತಪ್ಪಿಸಿಕೊಂಡು ಕಾಡಿನತ್ತ ಓಡಿ ಹೋಗಿದೆ.

ಅರಣ್ಯ ಇಲಾಖೆ ಸಿಬ್ಬಂದಿಗಳು ಸಹ ಕರಡಿ ಸೆರೆ ಹಿಡಿಯಲು ಯಾವುದೇ ಕ್ರಮ ಕೈಗೊಳ್ಳದೆ ಅವೈಜ್ಞಾನಿಕ ಕಾರ್ಯಾಚರಣೆ ನಡೆಸಿದ್ದಾರೆ. ಕೋಲಿನಿಂದ ತಿವಿದು ಕಿರುಕುಳ ನೀಡಿದ್ದಾರೆ. ಗಾಯಗೊಂಡಿದ್ದ ಕರಡಿಯನ್ನು ಸೆರೆ ಹಿಡಿದು ಚಿಕಿತ್ಸೆಯನ್ನೂ ನೀಡದೆ ಕಾಡಿನತ್ತ ಓಡಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )