ರೈತನ ಜೊತೆ ಹೊಲದಲ್ಲಿ ಸಿಎಂ ಕಬ್ಬು‌ ತಿಂದರು, ಸಸಿ ನೆಟ್ಟರು..!

ಈ ಸುದ್ದಿಯನ್ನು ಶೇರ್ ಮಾಡಿ

Cm-Kumarasw

ಬೀದರ ನ.15 :ಪ್ರಗತಿಪರ ರೈತರ ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬೀದರ ಜಿಲ್ಲೆಯ ರೈತ ಕಾಶಿಲಿಂಗ್ ಅಗ್ರಹಾರ ಅವರ ಹೊಲಕ್ಕೆ ನ.15ರಂದು ಭೇಟಿ ನೀಡಿದರು. ಕಾಶಿಲಿಂಗ ಅವರು ತಮ್ಮ ಸ್ವಂತ 6 ಎಕರೆ ಮತ್ತು ಇನ್ನುಳಿದ 4 ಎಕರೆ ಹೊಲದಲ್ಲಿ ಕೃಷಿಯಲ್ಲಿ ನಡೆಸಿದ ಹೊಸ ಪ್ರಯೋಗಗಳನ್ನು ಸಿಎಂ ಅವರು ಖುದ್ದು ವೀಕ್ಷಿಸಿದರು‌. ತಮ್ಮ ಪಕ್ಕಕ್ಕೆ ರೈತ ಕಾಶಿಲಿಂಗ ಅವರನ್ನು ಕರೆದು ಹಲವಾರು ಮಾಹಿತಿ ಪಡೆದರು. ಇದೆ ವೇಳೆ ಕೃಷಿ ಹೊಂಡ, ಪಾಲಿಹೌಸ್ ವೀಕ್ಷಿಸಿದರು.

# ಕಬ್ಬು ತಿಂದರು: 12 ತಿಂಗಳಿನ ಕಬ್ಬಿನ ಬೆಳೆ, ಅದರ ವಿಶೇಷತೆ ಕುರಿತು ಸಚಿವರಾದ ಬಂಡೆಪ್ಪ ಖಾಶೆಂಪೂರ ಅವರು ಸಿಎಂ ಅವರಿಗೆ ವಿವರಿಸಿದರು. ಈ ವೇಳೆ ಸಚಿವರಾದ ಬಂಡೆಪ್ಪ ಅವರು ಕಬ್ಬಿನ ಗಳವೊಂದನ್ನು ಮುರಿದು ತಿಂದು ಗಮನ ಸೆಳೆದರು.‌ ಬಳಿಕ ಮುಖ್ಯಮಂತ್ರಿ ಅವರು ಅವರು ಕೂಡ ಕಬ್ಬು ತಿಂದರು.

# ಸಸಿ ನೆಟ್ಟರು: ಹೈದರಾಬಾದನ ವಿಶ್ವಾನಂದ ರಾಜ ಅವರು ಸಸಿ ನೆಡುವ‌ ಇಜಿ ಪ್ಲಾಂಟರ್ ಕೃಷಿ ಸಾಧನದ ಬಗ್ಗೆ ಸಿಎಂ ಅವರಿಗೆ ಮಾಹಿತಿ ನೀಡಿದರು. ಬಳಿಕ ಸಿಎಂ ಅವರು ಆ ಸಾಧನದ ಮೂಲಕ ಹೊಲದಲ್ಲಿ ಸಸಿ‌ ನೆಟ್ಟರು.  ತೋಟಗಾರಿಕಾ ಯೋಜನೆಯ ಮಾಹಿತಿ: ಸಮಗ್ರ ತೋಟಗಾರಿಕಾ ಯೋಜನೆಯ ಅಳವಡಿಕೆಯನ್ನು ರೈತ ಕಾಶಿಲಿಂಗ ಅವರು ಅಳವಡಿಸಿಕೊಂಡ ಬಗ್ಗೆ ಸಿಎಂ ಅವರಿಗೆ ತೋಟಗಾರಿಕಾ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ ಭಾವುಗೆ ವಿವರಿಸಿದರು. ಈ ಸಂದರ್ಭದಲ್ಲಿ ಸಚಿವರಾದ ವೆಂಕಟರಾವ್ ನಾಡಗೌಡ, ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಅವರು ಇದ್ದರು.

WhatsApp Image 2018-11-15 at 9.04.41 PM WhatsApp Image 2018-11-15 at 9.04.43 PM WhatsApp Image 2018-11-15 at 9.04.44 PM

Facebook Comments