ಟ್ರಂಪ್ ಪತ್ನಿಯ ಕೆಂಗಣ್ಣಿಗೆ ಗುರಿಯಾದ ಶ್ವೇತಭವನದಿಂದ ಭದ್ರತಾ ಅಧಿಕಾರಿಣಿಗೆ ಗೇಟ್ ಪಾಸ್

ಈ ಸುದ್ದಿಯನ್ನು ಶೇರ್ ಮಾಡಿ

withe housವಾಷಿಂಗ್ಟನ್, ನ.15 (ಪಿಟಿಐ)-ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಕೆಂಗಣ್ಣಿಗೆ ಗುರಿಯಾದ ರಾಷ್ಟ್ರೀಯ ಹಿರಿಯ ಭದ್ರತಾ ಅಧಿಕಾರಣಿ ಶ್ವೇತ ಭವನದಿಂದ ನಿರ್ಗಮಿಸುವಂತಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭದ್ರತಾ ಸಲಹೆಗಳನ್ನು ನೀಡುತ್ತಿದ್ದ ದಕ್ಷ ಹಿರಿಯ ಅಧಿಕಾರಿಣಿ(ಡೆಪ್ಯೂಟಿ ನ್ಯಾಷನಲ್ ಸೆಕ್ಯೂರಿಟಿ ಅಡ್ವೆಸರ್) ಮೀರಾ ರಿಕಾರ್ಡೆಲ್ ಅವರು ವೈಟ್ ಹೌಸ್‍ನಿಂದ ಹೊರ ಬಂದಿದ್ದಾರೆ.

ಮೆಲಾನಿಯಾ ಟ್ರಂಪ್ ನಿನ್ನೆಯಷ್ಟೇ ಮೀರಾ ಅವರ ಬಗ್ಗೆ ಹೇಳಿಕೆ ನೀಡಿ ಅವರು ಶ್ವೇತಭವನದಲ್ಲಿ ಕಾರ್ಯನಿರ್ವಹಿಸುವ ಅರ್ಹತೆ ಹೊಂದಿಲ್ಲ ಎಂದು ಆರೋಪಿಸಿದ್ದರು. ಮೀರಾ ಅವರಿಗೆ ಬೇರೆ ಹುದ್ದೆ ನೀಡಲಾಗುವುದು. ಅವರು ಅಮೆರಿಕ ಸರ್ಕಾರದ ಸೇವೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಅಧ್ಯಕ್ಷರ ವಕ್ತಾರಿಣಿ ಸಾರಾ ಸಂಡೆರ್ಸ್ ತಿಳಿಸಿದ್ದಾರೆ.

Facebook Comments