ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಯುವಕರಿಬ್ಬರು ನೀರುಪಾಲು

ಈ ಸುದ್ದಿಯನ್ನು ಶೇರ್ ಮಾಡಿ

shipಮಂಗಳೂರು,ನ.15- ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಯುವಕರಿಬ್ಬರು ನೀರು ಪಾಲಾಗಿರುವ ಘಟನೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ದೇವಚಳ್ಳ ಗ್ರಾಮದ ದೇವಕಾಡು ನಿವಾಸಿಗಳಾದ ಲತೀಶ್ ಮತ್ತು ಎಲ್ಯಣ್ಣ ಮೃತಪಟ್ಟ ದುರ್ದೈವಿಗಳು.  ಇಂದು ಬೆಳಗ್ಗೆ ಮೃತರು ಸೇರಿದಂತೆ ಐವರು ಸುಳ್ಯ ತಾಲ್ಲೂಕಿನ ದಗನಕಜೆ ಬಳಿಯ ಕುಮಾರಧಾರ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ಲತೀಶ್ ಮತ್ತು ಎಲ್ಯಣ್ಣ ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments