ತಾಯಿ ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಮಗ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

mobilಮುಂಬೈ,ನ.15- ಅಮ್ಮ ಮೊಬೈಲ್ ಕಿತ್ತುಕೊಂಡಳು ಎಂಬ ಕಾರಣಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಮಹಾರಾಷ್ಟ್ರದ ನಾಗಪುರದ ನಿವಾಸಿ ಕ್ರಿಶ್ ಸುನಿಲ್ ಲುನಾವತ್(14) ಆತ್ಮಹತ್ಯೆ ಮಾಡಿಕೊಂಡ ಬಾಲಕ.  ಈತ ಒಂದು ವರ್ಷದಿಂದ ಶಾಲೆಗೂ ಹೋಗದೆ ಮನೆಯಲ್ಲೇ ಇದ್ದ. ಸೋದರಿ ಹಾಗೂ ತಾಯಿ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿ ಒಂಟಿಯಾಗಿರುತ್ತಿದ್ದ ಮೊಬೈಲ್‍ನಲ್ಲಿ ವಿಡಿಯೋ ಗೇಮ್ಸ್‍ನಲ್ಲಿ ಕಾಲ ಕಳೆಯುತ್ತಿದ್ದ. ತಾಯಿ ಮುಂಬೈಗೆ ಹೋಗಲಿಕ್ಕಾಗಿ ಮೊಬೈಲ್ ಪೋನ್ ಕೇಳಿದ್ದರೂ ಮಗ ಕೊಡದಿದ್ದಾಗ, ಆತನಿಂದ ಅದನ್ನು ಕಸಿದುಕೊಂಡು ಮುಂಬೈಗೆ ತೆರಳಿದ್ದರು. ಇದರಿಂದ ತೀವ್ರ ಕುಪಿತಗೊಂಡ ಬಾಲಕ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ. ತಾಯಿ ಮುಂಬೈನಿಂದ ಮನೆಗೆ ಮರಳಿದಾಗ ಮಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

Facebook Comments