ಮೊಬೈಲ್‍ಗೆ ಕರೆ ಮಾಡಿ ಅಕೌಂಟ್‍ನಿಂದ ಹಣ ಡ್ರಾ ಮಾಡಿದ ಕಳ್ಳ..!

ಈ ಸುದ್ದಿಯನ್ನು ಶೇರ್ ಮಾಡಿ

unokonಮೈಸೂರು, ನ.15-ಎಟಿಎಂ ಮಾಹಿತಿ ಪಡೆದು ವ್ಯಕ್ತಿಯೊಬ್ಬರ ಖಾತೆಯಿಂದ ಸಾವಿರಾರು ರೂಪಾಯಿ ಡ್ರಾ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಬನ್ನಿಮಂಟಪ ನಿವಾಸಿ ನಾಗರಾಜ್ ಅವರ ಅಕೌಂಟ್‍ನಿಂದ ಯಾರೋ ಹಣ ಡ್ರಾ ಮಾಡಿ ವಂಚಿಸಿದ್ದಾರೆ.

ನಾಗರಾಜ್ ನಗರದ ವುಡ್‍ಲ್ಯಾಂಡ್ ಚಿತ್ರಮಂದಿರದ ಬಳಿ ಇರುವ ಹೊಟೇಲ್‍ವೊಂಧರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಮೊಬೈಲ್‍ಗೆ ನಿನ್ನೆ ವ್ಯಕ್ತಿಯೊಬ್ಬ ಕರೆ ಮಾಡಿ ಹಣದ ವಹಿವಾಟಿನ ಮೆಸೇಜ್‍ಗಳು ನಿಮ್ಮ ಪೋನ್‍ಗೆ ಬರುತ್ತಿವೆಯೇ ಎಂದು ಪ್ರಶ್ನಿಸಿದ್ದಾನೆ. ನಿಮಗೆ ಎಸ್‍ಬಿಐನಿಂದ ಹೊಸ ಎಟಿಎಂ ಕಾರ್ಡ್ ನೀಡಲಾಗುತ್ತದೆ. ಹಳೆಯ ಕಾರ್ಡ್‍ನ ಪೋಟೋ ತೆಗೆದು ವಾಟ್ಸಪ್ ಮಾಡಿ ಎಂದು ತಿಳಿಸಿದ್ದಾನೆ. ಇದನ್ನು ನಂಬಿದ ನಾಗರಾಜ್ ತಮ್ಮ ಎಟಿಎಂ ಕಾರ್ಡ್ ಪೋಟೋ ತೆಗೆದು ವ್ಯಕ್ತಿ ಹೇಳಿದ ನಂಬರ್‍ಗೆ ವಾಟ್ಸಾಪ್ ಮಾಡಿದ್ದಾರೆ. ಇದಾದ ಹತ್ತೇ ನಿಮಿಷದಲ್ಲಿ ನಾಗರಾಜ್ ಅವರ ಅಕೌಂಟ್‍ನಿಂದ 9999ರೂ. ಡ್ರಾ ಆದ ಮೆಸೇಜ್ ಬಂದಿದೆ.

ಕೂಡಲೇ ಅವರು ಎಸ್‍ಬಿಐ ಮುಖ್ಯ ಶಾಖೆಗೆ ಹೋಗಿ ವಿಚಾರಿಸಿದ್ದಾರೆ. ಅಲ್ಲಿನ ಸಿಬ್ಬಂದಿ ಪರಿಶೀಲಿಸಿ ನಿಮ್ಮ ಖಾತೆಯಿಂದ ಹಣ ಡ್ರಾ ಆಗಿದೆಯಲ್ಲ ಎಂದಾಗ ನಾಗರಾಜ್‍ಗೆ ತಾವು ಮೋಸ ಹೋಗಿರುವುದು ಗೊತ್ತಾಗಿದೆ. ನಂತರ ಅವರು ಎನ್.ಆರ್.ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದಾರೆ.

Facebook Comments