ಆಸಿಯಾನ್-ಭಾರತ ಶೃಂಗಸಭೆ : ಸಾಗರ ಪ್ರದೇಶ ರಕ್ಷಣಾ ಸಹಕಾರಕ್ಕೆ ಮೋದಿ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

sabmitಸಿಂಗಪುರ್, ನ.15 (ಪಿಟಿಐ)- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಿಂಗಪುರ್‍ನಲ್ಲಿ ಆಸಿಯಾನ್-ಭಾರತ ಶೃಂಗಸಭೆಯ ಉಪಾಹಾರ ಕೂಟದಲ್ಲಿ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ವಿವಿಧ ದೇಶಗಳ ನಾಯಕರೊಂದಿಗೆ ಅವರು ಮಹತ್ವದ ವಿಷಯಗಳ ಕುರಿತು ಚರ್ಚಿಸಿದರು.

ಸಾಗರ ಪ್ರದೇಶಗಳ ರಕ್ಷಣಾ ಸಹಕಾರ ಹಾಗೂ ಇಂಡೋ-ಪೆಸಿಫಿಕ್ ಪ್ರಾಂತ್ಯದ ಸಮೃದ್ಧತೆಗಾಗಿ ವಾಣಿಜ್ಯ ಬಾಂಧವ್ಯ ಬಲವರ್ಧನೆಯನ್ನು ಮೋದಿ ಇದೇ ಸಂದರ್ಭದಲ್ಲಿ ಪ್ರತಿಪಾದಿಸಿದರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವಿಟರ್‍ನಲ್ಲಿ ತಿಳಿಸಿದ್ಧಾರೆ. ಎರಡು ದಿನಗಳ ಸಿಂಗಪುರ್ ಪ್ರವಾಸದ ವೇಳೆ ಆಸಿಯಾನ್ ಶೃಂಗಸಭೆ, ಪೂರ್ವ ಏಷ್ಯಾ ಸಮಾವೇಶ ಸೇರಿದಂತೆ ಅನೇಕ ಅಧಿಕೃತ ಕಾರ್ಯಕ್ರಮಗಳಲ್ಲಿ ಪ್ರಧಾನಿ ಪಾಲ್ಗೊಂಡರು.

ಸಿಂಗಪುರ್ ಭೇಟಿ ಸಂದರ್ಭದಲ್ಲಿ ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಬಲವರ್ಧನೆಗೆ ಮತ್ತಷ್ಟು ಪುಷ್ಟಿ ನೀಡಲು ಸಮಾಲೋಚನೆ ನಡೆಸಿದರು. ಅಲ್ಲದೇ ಸಿಂಗಪುರ್, ಆಸ್ಟ್ರೇಲಿಯಾ, ಥೈಲೆಂಡ್ ಸೇರಿದಂತೆ ಕೆಲವು ದೇಶಗಳ ನಾಯಕರೊಂದಿಗೆ ಚರ್ಚಿಸಿ ವಾಣಿಜ್ಯ, ರಕ್ಷಣೆ ಮತ್ತು ಭದ್ರತಾ ವಿಷಯಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )