ವಸ್ತ್ರವಿನ್ಯಾಸಕಿ ಹಾಗೂ ಕಾವಲುಗಾರನನ್ನು ಕೊಂದಿದ್ದ ಆರೋಪಿಗಳು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Maya--01

ನವದೆಹಲಿ, ನ.15- ವೇತನ ನೀಡಲಿಲ್ಲ ಎಂಬ ಕೋಪದಲ್ಲಿ ವಸ್ತ್ರವಿನ್ಯಾಸಕಿ ಹಾಗೂ ಕಾವಲುಗಾರನನ್ನು ಕಳೆದ ರಾತ್ರಿ ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ವಸ್ತ್ರವಿನ್ಯಾಸಕಿ ಮಾಯ ಲಖಾನಿ (53) ಹಾಗೂ ಕಾವಲುಗಾರ ಬಹದ್ದೂರ್ (50) ನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು.

ಘಟನೆ ವಿವರ:
ವಸ್ತ್ರ ವಿನ್ಯಾಸಕಿ ಮಾಯ ಲಖಾನಿ ವಸಂತ್‍ಕುಂಗ್ ಪ್ರದೇಶದಲ್ಲಿ ವಾಸವಿದ್ದು, ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಟೈಲರ್ ಅನ್ವರ್‍ಗೆ ವೇತನವನ್ನು ನೀಡಲು ಸತಾಯಿಸುತ್ತಿದ್ದರು. ವೇತನ ನೀಡುವಂತೆ ಮಾಯಳನ್ನು ಕೇಳುತ್ತಿದ್ದ ಅನ್ವರ್ ನಿನ್ನೆ ರಾತ್ರಿ 11 ಗಂಟೆಗೆ ತನ್ನಿಬ್ಬರು ಸ್ನೇಹಿತರೊಂದಿಗೆ ಮಾಯಾಳ ಮನೆ ಬಳಿಗೆ ತೆರಳಿ ಆಕೆಗೆ ಕೆಲವು ಬಟ್ಟೆಗಳನ್ನು ತೋರಿಸುವ ನೆಪದಲ್ಲಿ ಆಕೆಯನ್ನು ಚಾಕುವಿನಿಂದ ತಿವಿದಿದ್ದಾನೆ, ಮಾಯಾಳ ಚೀರಾಟವನ್ನು ಕೇಳಿ ಧಾವಿಸಿ ಬಂದ ಕಾವಲುಗಾರ ಬಹದ್ದೂರ್‍ನಿಗೂ ಅನ್ವರ್  ಹಾಗೂ ಆತನ ಸಹಚರರು ಚಾಕುವಿನಿಂದ ಇರಿದಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ನಂತರ ಅನ್ವರ್ ಮಾಯಾಳ ಕಾರಿನಲ್ಲೇ ಆಕೆಯ ಮನೆಯಲ್ಲಿದ್ದ ವಸ್ತುಗಳನ್ನು ಕದ್ದುಕೊಂಡು ಹೋಗುವಾಗ ಮಾಡಿದ ತಪ್ಪಿನ ಅರಿವಾಗಿ ಪೊಲೀಸರಿಗೆ ಶರಣಾಗಿದ್ದಾರೆ. ಮಾಯಾ ಹಾಗೂ ಬಹದ್ದೂರ್‍ರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಪ್ರಕರಣ ವನ್ನು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )