ಕೈಕೊಟ್ಟ ಟ್ರಂಪ್, ಗಣರಾಜ್ಯೋತ್ಸವದ ಹೊಸ ಅತಿಥಿ ಯಾರು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Republic-Day

ನವದೆಹಲಿ, ನ.15- ಮುಂದಿನ ವರ್ಷ ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ದಕ್ಷಿಣ ಆಫ್ರಿಕಾ ಆಧ್ಯಕ್ಷ ಸಿರಿಲ್ ರಮಫೋಸಾ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಭಾರತ ಸರ್ಕಾರ ಮಾಡಿದ್ದ ಮನವಿಯನ್ನು ಸಿರಿಲ್ ರಮಫೋಸಾ ಸ್ವೀಕರಿಸಿದ್ದು, ಭಾರತಕ್ಕೆ ಆಗಮಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಆಫ್ರಿಕಾದ ಗಾಂಧಿ ಎಂದೇ ಖ್ಯಾತರಾಗಿದ್ದ ನೆಲ್ಸನ್ ಮಂಡೇಲಾ ಅವರ ಆಪ್ತರಾಗಿರುವ ಸಿರಿಲ್ ರಮಪೋಸಾ ಅವರನ್ನು ಸ್ವತಃ ಮಂಡೇಲಾ ಅವರು ಮುಂದಿನ ದಕ್ಷಿಣ ಆಫ್ರಿಕಾದ ಅಧ್ಯಕ್ಷೀಯ ಗಾದಿಗೆ ಶಿಫಾರಸು ಮಾಡಿದ್ದರು. ಸಿರಿಲ್ ರಮಫೋಸಾ ಕೂಡ ಗಾಂಧಿವಾದಿಗಳಾಗಿದ್ದು, ಇದೇ ಕಾರಣಕ್ಕೆ ಭಾರತ ಸರ್ಕಾರ ಅವರನ್ನು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಮನವಿ ಮಾಡಿತ್ತು.

ಇನ್ನು ಸಿರಿಲ್ ರಮಫೋಸಾ ಅವರಿಗೂ ಮುನ್ನ ಭಾರತ ಸರ್ಕಾರ ಅಮೆರಿಕ ಅಧ್ಯಕ್ಷ ಡೊನಾಲ್ಡ ಟ್ರಂಪ್ ಅವರಿಗೆ ಆಹ್ವಾನ ನೀಡಿತ್ತು. ಆದರೆ ವೇಳಾಪಟ್ಟಿ ಗೊಂದಲದ ಹಿನ್ನಲೆಯಲ್ಲಿ ಭಾರತ ಸರ್ಕಾರದ ಮನವಿಯನ್ನು ಶ್ವೇತಭವನ ತಿರಸ್ಕರಿಸಿತ್ತು.

Facebook Comments

Sri Raghav

Admin