BIG SHOCKING : ವೀರ್ಯವಿಲ್ಲದೆ ನಪುಂಸಕರಾಗುತ್ತಿದ್ದಾರೆ ಪುರುಷರು.! ಪಾಶ್ಚಿಮಾತ್ಯರಲ್ಲೇ ‘ನಿಮಿರು’ ಸಮಸ್ಯೆ.!

ಈ ಸುದ್ದಿಯನ್ನು ಶೇರ್ ಮಾಡಿ

Sperm--01

ಲಂಡನ್, ನ.15-ಪಾಶ್ಚಿಮಾತ್ಯ ರಾಷ್ಟ್ರಗಳ ಪುರುಷರಲ್ಲಿ ವೀರ್ಯ ಪ್ರಮಾಣ ಗಣನೀಯವಾಗಿ ಕುಸಿಯುತ್ತಿರುವುದು ಆರೋಗ್ಯ ಮತ್ತು ಪುರುಷತ್ವಕ್ಕೆ ಸವಾಲಾಗಿ ಪರಿಣಮಿಸಿದೆ. ನಪುಂಸಕತೆ ಪಾಶ್ಚಾತ್ಯ ಜಗತ್ತನ್ನು ಕಾಡುತ್ತಿರುವ ಗಂಭೀರ ಸಮಸ್ಯೆಯಾಗಿದೆ. ಅಮೆರಿಕ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಹಾಗೂ ಯೂರೋಪ್ ಖಂಡದ ದೇಶಗಳ ಪುರುಷರಲ್ಲಿ ಧಾತು (ಸ್ಪರ್ಮ್ ಕೌಂಟ್) ನಷ್ಟ ಸಮಸ್ಯೆ ಇತ್ತೀಚಿನ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಾಗಿದೆ. ವಾಸ್ತವ ಸಂಗತಿ ಎಂದರೆ ಕಳೆದ 40 ವರ್ಷಗಳಿಂದ ಪಾಶ್ಚಿಮಾತ್ಯ ಜಗತ್ತಿನ ಗಂಡಸರಲ್ಲಿ ವೀರ್ಯ ಕುಂಠಿತ ಶೇ.50ಕ್ಕಿಂತಲೂ ಕಡಿಮೆಯಾಗಿದ್ದು, ಇದು ಕ್ಷಿಪ್ರವಾಗಿ ಮುಂದುವರಿದಿರುವುದು ಆ ದೇಶಗಳ ಪುರುಷ ಸಮುದಾಯವನ್ನು ಚಿಂತೆಗೀಡು ಮಾಡಿದೆ.

ಕಳೆದ ಕೆಲವು ವರ್ಷಗಳಿಂದ ಈ ನಿಟ್ಟಿನಲ್ಲಿ ಸಂಶೋಧಕರು ಅನೇಕ ಅಧ್ಯಯನಗಳನ್ನು ನಡೆಸುತ್ತಾ ನಿಖರ ಕಾರಣಗಳನ್ನು ಪತ್ತೆ ಮಾಡಲು ಶ್ರಮಿಸುತ್ತಿದ್ದಾರೆ. 40 ವರ್ಷಗಳಿಂದಲೂ ಪಾಶ್ಚಿಮಾತ್ಯ ಪುರುಷರಲ್ಲಿ ವೀರ್ಯ ನಷ್ಟ ವೇಗದ ಗತಿಯಲ್ಲೇ ಮುಂದುವರಿದಿದೆ. ಇದು ಆ ದೇಶಗಳ ಗಂಡಸರ ಆರೋಗ್ಯ ಮತ್ತು ಪುರುಷತ್ವಕ್ಕೂ ದಕ್ಕೆ ಉಂಟು ಮಾಡುತ್ತಿದೆ ಎಂಬುದನ್ನು ಅಧ್ಯಯನ ವರದಿಗಳಲ್ಲಿ ತಿಳಿಸಲಾಗಿದೆ.

ವಿಶೇಷವಾಗಿ ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಐರೋಪ್ಯ ದೇಶಗಳ ಪುರುಷ ಸಮುದಾಯದಲ್ಲಿ ಧಾತು ನಶಿಸುತ್ತಿರುವುದರ ಬಗ್ಗೆ ಎಚ್ಚರಿಕೆ ಗಂಟೆ ಮೊಳಗಿಸಿರುವ ಇಸ್ರೇಲ್‍ನ ಹೆಬ್ರ್ಯೂ ವಿಶ್ವವಿದ್ಯಾಲಯದ ಸಂಶೋಧಕ ಡಾ ಹಗೈ ಲೆವೈನ್ ಇದಕ್ಕೆ ನಿಖರ ಕಾರಣಗಳನ್ನು ಪತ್ತೆ ಮಾಡಲು ಮುಂದಾಗುವಂತೆ ವಿಶ್ವದ ಆರೋಗ್ಯ ಸಂಶೋಧಕರಲ್ಲಿ ಮನವಿ ಮಾಡಿದ್ದಾರೆ.

ಪಾಶ್ಚಾತ್ಯ ಜಗತ್ತಿನಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯ, ಬೊಜ್ಜು, ಧೂಮಪಾನ, ಕೆಲಸದ ಒತ್ತಡ, ಖಿನ್ನತೆ, ಕೆಲವು ರಾಸಾಯನಿಕ ಮತ್ತು ಕೀಟನಾಶಕ ಮೊದಲಾದ ಕಾರಣಗಳಿಂದ ಪುರುಷರಲ್ಲಿ ವೀರ್ಯ ನಶಿಸಿ ನಪುಂಸಕತೆ ಉಂಟಾಗುತ್ತಿರುವುದು ಮೇಲ್ನೋಟಕ್ಕೆ ಕಾರಣವಾದರೂ ಇವುಗಳ ಆಚೆ ಇರುವ ನಿಖರ ವೈಜ್ಞಾನಿಕ ಸಂಗತಿಗಳನ್ನು ತಿಳಿಯಲು ಈಗಲೂ ಸಂಶೋಧನೆ ಮುಂದುವರಿದಿದೆ. ವೀರ್ಯ ಪ್ರಮಾಣ ಕುಂಠಿತಗೊಂಡಿರುವ ಪುರುಷರು ಜನನಾಂಗ ಉದ್ರೇಕ ಸಮಸ್ಯೆ, ನಿಮಿರು ದೌರ್ಬಲ್ಯ ( ಎರೆಕ್ಟ್ರೈಲ್ ಡಿಸ್‍ಫನ್ಷನ್), ಸಂಗಾತಿಯನ್ನು ತೃಪ್ತಿಪಡಿಸಲು ಸಾಧ್ಯವಾಗದಿರುವಿಕೆ, ದಾಂಪತ್ಯ ಕಲಹ ಮೊದಲಾದ ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಪುರುಷರಲ್ಲಿ ಧಾತು ಗಣನೀಯವಾಗಿ ಕಡಿಮೆಯಾಗಿರುವುದು ಗಂಡಸರ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ವೀರ್ಯ ಪ್ರಮಾಣ ಮತ್ತು ಧಾತು ಪುಷ್ಟಿಯನ್ನು ಹೆಚ್ಚಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳದಿದ್ದರೆ ಇದು ಅವರ ಬದುಕಿಗೆ ಪೂರಕವಾಗುತ್ತದೆ. ಸಮಾಜ ಸ್ವಾಸ್ಥ್ಯದ ಮೇಲೂ ಗಂಭೀರ ದುಷ್ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ. ಪುರುಷರಲ್ಲಿ ಇದೇ ರೀತಿ ವೀರ್ಯ ನಷ್ಟ ಮತ್ತು ಪೌರುಷತ್ವ ಇಲ್ಲದಿರುವಿಕೆ ಮುಂದುವರಿದರೆ ಸಂತಾನೋತ್ಪತ್ತಿಗೆ ದೊಡ್ಡ ಮಟ್ಟದಲ್ಲಿ ಅಡ್ಡಿಯಾಗುತ್ತದೆ. ಇದರಿಂದ ಭವಿಷ್ಯದಲ್ಲಿ ದೂರಗಾಮಿ ಪರಿಣಾಮಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಈ ಕುರಿತು ಹಲವಾರು ವರ್ಷಗಳಿಂದ ಅಧ್ಯಯನ ನಡೆಸಿರುವ ಸಂಶೋಧಕರು ತಿಳಿಸಿದ್ದಾರೆ.

Facebook Comments

Sri Raghav

Admin