ತಾಲಿಬಾನ್ ಉಗ್ರರ ದಾಳಿಗೆ 30 ಪೊಲೀಸರ ಬಲಿ, 17 ಉಗ್ರರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

talibanಕಾಬೂಲ್, ನ.15-ಹಿಂಸಾಚಾರ ಪೀಡಿತ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರೆದಿದೆ. ಪಶ್ಚಿಮ ಫರಾ ಪ್ರಾಂತ್ಯದಲ್ಲಿ ಮಿಂಚಿನ  ದಾಳಿ ನಡೆಸಿದ ಬಂಡುಕೋರರು 30ಕ್ಕೂ ಹೆಚ್ಚು ಪೊಲೀಸರನ್ನು ಹತ್ಯೆ ಮಾಡಿದ್ದಾರ. ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ 17 ತಾಲಿಬಾನ್ ಹೋರಾಟಗಾರರು ಹತರಾಗಿದ್ದಾರೆ.

ಈ ಘರ್ಷಣೆಯಲ್ಲಿ ಹಲವರು ತೀವ್ರ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಖಾಕಿ ಸಫೇದ್ ಜಿಲ್ಲೆಯ ಪೊಲೀಸ್ ಔಟ್‍ಪೋಸ್ಟ್ ಮೇಲೆ ಹಠಾತ್ ದಾಳಿ ನಡೆಸಿ ತಾಲಿಬಾನ್ ಉಗ್ರರು ನಾಲ್ಕು ಗಂಟೆಗಳ ಕಾಲ ನಡೆಸಿದ ಆಕ್ರಮಣದಲ್ಲಿ 30ಕ್ಕೂ ಹೆಚ್ಚು ಪೊಲೀಸರು ಹತರಾಗಿದ್ದಾರೆ ಎಂದು ಪ್ರಾಂತೀಯ ಮಂಡಳಿ ಸದಸ್ಯರೊಬ್ಬರು ತಿಳಿಸಿದ್ದಾರೆ. ಈ ಹತ್ಯಾಕಾಂಡ ನಂತರ ಬಂಡುಕೋರರು ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಗಳನ್ನು ಅಪಹರಿಸಿ ಪರಾರಿಯಾಗಿದ್ದಾರೆ.

Facebook Comments