ನಾಳೆ ಥಿಯೇಟರ್’ಗೆ ಬರ್ತಿದ್ದಾನೆ`ತಾಯಿಗೆ ತಕ್ಕ ಮಗ’

ಈ ಸುದ್ದಿಯನ್ನು ಶೇರ್ ಮಾಡಿ

Tayige-Taka-Mgan01
ತಾಯಿಗೆ ತಕ್ಕ ಮಗ ಎಂದ ಕೂಡಲೇ ನೆನಪಿಗೆ ಬರುವುದು 70ರ ದಶಕದಲ್ಲಿ ಬಂದಂತಹ ಡಾ.ರಾಜ್‍ಕುಮಾರ್ ಹಾಗೂ ಪದ್ಮಪ್ರಿಯ ಅಭಿನಯದ ಚಿತ್ರ. ಅದೊಂದು ಮೈಲಿಗಲ್ಲಿನ ಚಿತ್ರ. ಆದರೆ, ಅದೇ ಶೀರ್ಷಿಕೆ ಬಳಸಿಕೊಂಡು ತಾಯಿ-ಮಗನ ಬಾಂಧವ್ಯದ ಕಥಾಹಂದರವನ್ನು ಸಿದ್ಧಪಡಿಸಿ ಇವತ್ತಿನ ಕಾಲಘಟ್ಟಕ್ಕೆ ಹೊಂದುವಂತಹ ಚಿತ್ರವನ್ನು ತೆರೆ ಮೇಲೆ ತರುತ್ತಿದ್ದಾರೆ ನಿರ್ದೇಶಕ ಶಶಾಂಕ್. ಈ ಚಿತ್ರವು ಇದೇ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.

ನಾಯಕ ಅಜಯ್‍ರಾವ್‍ಗೆ ತಾಯಿಗೆ ತಕ್ಕ ಮಗ 25ನೆ ಚಿತ್ರವಾಗಿದೆ. ಇವರ ಅಭಿನಯದ ಎಕ್ಸ್‍ಕ್ಯೂಸ್‍ಮೀ ಚಿತ್ರದಲ್ಲಿ ಸುಮಲತಾ ಅಂಬರೀಶ್ ಅವರು ತಾಯಿಯಾಗಿ ಅಭಿನಯಿಸಿದ್ದರು. ಮತ್ತೊಮ್ಮೆ ಅಮ್ಮ-ಮಗನಾಗಿ ಬೆಳ್ಳಿ ಪರದೆ ಮೇಲೆ ಇಬ್ಬರು ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಲವರ್ ಬಾಯ್ ಹಾಗೂ ತ್ಯಾಗಮಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅಜಯ್ ಈ ಚಿತ್ರದಲ್ಲಿ ಆ್ಯಕ್ಷನ್ ಹೀರೋ ಆಗಿ ಮಿಂಚಲಿದ್ದಾರೆ. ಸಾಮಾನ್ಯವಾಗಿ ಎಲ್ಲಾ ತಾಯಂದಿರು ಸ್ವಾರ್ಥಕ್ಕಾಗಿ ಹೋರಾಡಿದರೆ, ಈ ಚಿತ್ರದಲ್ಲಿ ತಾಯಿಯಾದವಳು ಅನ್ಯಾಯ, ಸಮಾಜದ ವಿರುದ್ಧ ಹೋರಾಡಲು ಮಗನಿಗೆ ಹುಮ್ಮಸ್ಸು ಕೊಡುವಂತಹ ಪಾತ್ರ ಸಿಕ್ಕಿದೆಯಂತೆ. ಒಟ್ಟಿನಲ್ಲಿ ಬಹಳಷ್ಟು ನಿರೀಕ್ಷೆಯನ್ನು ಅಜಯ್‍ರಾವ್ ಇಟ್ಟುಕೊಂಡಿದ್ದಾರೆ.

ಇನ್ನು ತಾಯಿಯಾಗಿ ಸುಮಲತಾ ಅಂಬರೀಶ್ ಮಗನಿಗೆ ಬೆನ್ನು ತಟ್ಟುತ್ತ ಅನ್ಯಾಯದ ವಿರುದ್ಧ ಸಿಡಿದೇಳುವಂತೆ ಪ್ರೇರೇಪಿಸುವ ಪಾತ್ರವನ್ನು ಮಾಡಿದ್ದಾರಂತೆ. ಹಾಗೆಯೇ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅಚ್ಯುತ್‍ಕುಮಾರ್, ಸಾಧುಕೋಕಿಲ ಸೇರಿದಂತೆ ಹಲವಾರು ಕಲಾವಿದರಿದ್ದು, ಶಶಾಂಕ್‍ನಿರ್ಮಿಸಿ ನಿರ್ದೇಶನ ಮಾಡಿದ್ದಾರೆ. ಇದೊಂದು ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರವಾಗಿದ್ದು, ಜೂಡೋ ಸ್ಯಾಂಡಿ ಸಂಗೀತ ನೀಡಿರುವ ಈ ಚಿತ್ರ ಇದೇ ವಾರ ತೆರೆ ಮೇಲೆ ಅಬ್ಬರಿಸುತ್ತಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin