ಇಂದಿನ ಪಂಚಾಗ ಮತ್ತು ರಾಶಿಫಲ (15.11.2018 – ಗುರುವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :ತಮ್ಮ ಕೆಟ್ಟ ನಡತೆಯ ವಿಚಾರದಲ್ಲಿ ಸ್ವಾಭಾವಿಕವಾಗಿ ಕುರುಡರೇ ಆಗಿರುವ ಕೆಟ್ಟವರು ಬೇರೆಯವರ ತಪ್ಪುಗಳನ್ನು ಹುಡುಕುವುದರಲ್ಲಿ ದಿವ್ಯದೃಷ್ಟಿಯನ್ನು ಪಡೆದಿರುತ್ತಾರೆ. ತಮ್ಮ ಗುಣಗಳನ್ನು ಬಹಳ ಗಟ್ಟಿಯಾಗಿ ಹೇಳುವ ಇವರು ಬೇರೆಯವರ ಗುಣಗಳ ವಿಚಾರದಲ್ಲಿ ಮೌನವಾಗಿರುತ್ತಾರೆ.
-ಶಿಶುಪಾಲವಧ

Rashi-Bhavishya--01

# ಪಂಚಾಂಗ : ಗುರುವಾರ, 15.11.2018
ಸೂರ್ಯ ಉದಯ ಬೆ.06.18 / ಸೂರ್ಯ ಅಸ್ತ ಸಂ.05.50
ಚಂದ್ರ ಉದಯ ಮ.12.28 / ಚಂದ್ರ ಅಸ್ತ ರಾ,.11.30
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ
ಶುಕ್ಲ ಪಕ್ಷ / ತಿಥಿ : ಸಪ್ತಮಿ (ಬೆ.07.04)
ನಕ್ಷತ್ರ:  ಶ್ರವಣ (ಬೆ.08.45) / ಯೋಗ: ವೃದ್ಧಿ (ಸಾ.05.39)
ಕರಣ: ವಣಿಜ್-ಭದ್ರೆ (ಬೆ.07.04-ರಾ.08.24)
ಮಳೆ ನಕ್ಷತ್ರ: ವಿಶಾಖ  / ಮಾಸ: ತುಲಾ / ತೇದಿ: 30

Rashi-Bhavishya--01# ರಾಶಿ ಭವಿಷ್ಯ 
ಮೇಷ : ನಾಯಕತ್ವ ಗುಣಕ್ಕೆ ಮನ್ನಣೆ ದೊರೆಯು ವುದು. ಆರ್ಥಿಕ ಸ್ಥಿತಿಯು ಉತ್ತಮವಾಗಿರುವುದು
ವೃಷಭ : ಬಂಧು-ಮಿತ್ರರ ಭೇಟಿ ಆಗಲಿದೆ. ಸಹೋದರರ ಸಹಕಾರ ದೊರೆಯಲಿದೆ
ಮಿಥುನ: ಯಶಸ್ಸು ಸಾಧಿಸಲು ಸಹನೆ, ತಾಳ್ಮೆ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಒಳಿತು
ಕಟಕ : ಸಣ್ಣಪುಟ್ಟ ಅಡೆ ತಡೆಗಳ ಬಗ್ಗೆ ಗಮನ ಕೊಡದೆ ಆತ್ಮವಿಶ್ವಾಸದಿಂದಿರಿ
ಸಿಂಹ: ದೀರ್ಘಕಾಲೀನ ಹೂಡಿಕೆಗಳ ಬಗ್ಗೆ ಆಸಕ್ತಿ ಹೊಂದಿ ಕಾರ್ಯೋನ್ಮುಖರಾಗುವಿರಿ
ಕನ್ಯಾ: ಹಣಕಾಸಿನ ವ್ಯವಹಾರ ದಿಂದ ತಲೆನೋವಾಗುವುದು
ತುಲಾ: ಸಂಗಾತಿ ಸಲಹೆಯಿಂದ ಸಮಸ್ಯೆಗೆ ಪರಿಹಾರ ಸಿಗಲಿದೆ
ವೃಶ್ಚಿಕ: ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿ ದ್ದಕ್ಕೆ ಮೇಲಧಿಕಾರಿಗಳು ನಿಮ್ಮನ್ನು ಹೊಗಳುವರು
ಧನುಸ್ಸು: ಕೆಲಸದ ಸಲುವಾಗಿ ಹಣ ಖರ್ಚಾಗಲಿದೆ
ಮಕರ: ಸಂಗಾತಿಯೊಂದಿಗಿನ ಶಾಪಿಂಗ್ ಖುಷಿ ನೀಡಲಿದೆ
ಕುಂಭ: ಉದ್ಯಾನಗಳಲ್ಲಿ ವಿಹಾರ. ಬಂಧುಗಳ ಭೇಟಿ
ಮೀನ: ಕೃಷಿ ಕಾರ್ಯದಲ್ಲಿ ಮುನ್ನಡೆ ಸಾಧಿಸುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

2 thoughts on “ಇಂದಿನ ಪಂಚಾಗ ಮತ್ತು ರಾಶಿಫಲ (15.11.2018 – ಗುರುವಾರ )

Comments are closed.