ಮಕ್ಕಳ ದಿನಾಚರಣೆಯಂದೇ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ..!

ಈ ಸುದ್ದಿಯನ್ನು ಶೇರ್ ಮಾಡಿ

Babies--01

ತುಮಕೂರು, ನ.15- ಹಲವು ವರ್ಷಗಳಿಂದ ಮಕ್ಕಳಿಲ್ಲದೆ ಕಂಗಾಲಾಗಿದ್ದ ಮಹಿಳೆ ಮಕ್ಕಳ ದಿನಾಚರಣೆಯಂದೇ ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದು , ಇಡೀ ಕುಟುಂಬವೇ ಸಂತಸದಲ್ಲಿ ತೇಲಾಡಿದೆ. ಶಿರಾ ತಾಲ್ಲೂಕಿನ ಹುಚ್ಚೇಘಟ್ಟೆ ಗ್ರಾಮದ ನಿವಾಸಿ ಶೈಲಾ (24) ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ.

ಕಳೆದ ವರ್ಷಗಳಿಂದ ಶೈಲಾ ಮಕ್ಕಳಿಲ್ಲದೆ ತೀವ್ರ ನೋವನ್ನು ಅನುಭವಿಸುತ್ತಿದ್ದರು. ಜತೆಗೆ ಎರಡು ಮೂರು ಬಾರಿ ಗರ್ಭಪಾತಕ್ಕೆ ತುತ್ತಾಗಿ ಬಹಳ ನೊಂದು ಕೊಂಡಿದ್ದರು. ಇದರಿಂದ ಕುಟುಂಬ ಸದಸ್ಯರಿಗೂ ತುಂಬಾ ಬೇಸರ ತಂದಿತ್ತು. ನಿನ್ನೆ ಶಿರಾದ ಖಾಸಗಿ ಆಸ್ಪತ್ರೆಯಲ್ಲಿ ಶೈಲಾ ಮೂರು ಮಕ್ಕಳಿಗೆ ಜನ್ಮ ನೀಡಿದ್ದು ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.

ಡಾ.ಶಿಲ್ಪಾ ನೇತೃತ್ವದ ತಂಡ ಸತತ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಹೆರಿಗೆ ಮಾಡಿಸಲಾಯಿತು.  ತಾಯಿ-ಶಿಶುಗಳು ಆರೋಗ್ಯದಿಂದಿದ್ದು , ವೈದ್ಯರೇ ಈ ಅಚ್ಚರಿಯಿಂದ ಚಕಿತಗೊಂಡಿದ್ದಾರೆ. ಈ ಸುದ್ದಿ ತಿಳಿದು ಕುಟುಂಬ ಸದಸ್ಯರು, ಗ್ರಾಮಸ್ಥರು ಆಸ್ಪತ್ರೆಗೆ ಭೇಟಿ ನೀಡಿ ಪೋಷಕರಿಗೆ ಅಭಿನಂದಿಸಿದ್ದಾರೆ. ಶಿವನ ಬಳಿ ಸಂತಾನ ಪ್ರಾಪ್ತಿಗಾಗಿ ಪ್ರಾರ್ಥನೆ ನಡೆಸಿದರೆ ಈಗ ಮೂರು ಸಂತಾನಗಳು ಸಿಕ್ಕಿವೆ ಎಂದು ಕೆಲವರು ಹರ್ಷ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin