ಅಪ್ರಾಪ್ತೆಗೆ ಕಣ್ಣು ಹೊಡೆದವನಿಗೆ 3 ವರ್ಷ ಜೈಲು..!

ಈ ಸುದ್ದಿಯನ್ನು ಶೇರ್ ಮಾಡಿ

Jail--02

ಮುಂಬೈ,ನ.16- ಅಪ್ರಾಪ್ತೆಯೊಬ್ಬಳನ್ನು ಹಿಂಬಾಲಿಸಿ ಆಕೆಯ ಮೇಲೆ ಕೆಟ್ಟ ನೋಟ ಬೀರಿ ಕಣ್ಣು ಹೊಡೆದ ಯುವಕನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಮಹಾರಾಷ್ಟ್ರದ ಮರಾಠಾವಾಡಾದ ಬೀಡ್ ಜಿಲ್ಲೆಯಲ್ಲಿ ಆರೋಪಿ ಪುರುಷೋತ್ತಮ್ ವೀರ್ ಎಂಬಾತ 16 ವರ್ಷದ ಬಾಲಕಿಯನ್ನು ಹಲವು ದಿನಗಳಿಂದ ಹಿಂಬಾಲಿಸುತ್ತಿದ್ದ. ಕಳೆದ ವರ್ಷ ಏ.20ರಂದು ಆತ ರೆಮೋಹ ಪ್ರದೇಶದ ರಸ್ತೆಯಲ್ಲೇ ಅಪ್ರಾಪ್ತೆಯನ್ನು ಕೆಟ್ಟ ದೃಷ್ಟಿಯಿಂದ ನೋಡಿದ್ದಲ್ಲದೆ ಪದೇ ಪದೇ ಕಣ್ಣು ಹೊಡೆದಿದ್ದ.  ಈ ಸಂಬಂಧ ಬಾಲಕಿ, ಪೋಷಕರ ನೆರವಿನೊಂದಿಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ವಿಚಾರಣೆ ನಡೆಸಿದ ಬೀಡ್ ನ್ಯಾಯಾಲಯವು ಇದೀಗ ಆರೋಪಿಗೆ 500 ರೂ. ದಂಡ ಹಾಗೂ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.

Facebook Comments