ಸಿಬ್ಬಂದಿಗಳ ಬೇಜವಾಬ್ದಾರಿ : ರಾಷ್ಟ್ರಧ್ವಜಕ್ಕೆ ಅಪಮಾನ

ಈ ಸುದ್ದಿಯನ್ನು ಶೇರ್ ಮಾಡಿ

flagಹನೂರು, ನ.16- ಹನೂರು ವಿಧಾನ ಕ್ಷೇತ್ರ ವ್ಯಾಪ್ತಿಗೆ ಸೇರಿದ ಕೊಂಗರಹಳ್ಳಿ ಗ್ರಾಪಂಯಲ್ಲಿ ಸರ್ಕಾರದ ಆದೇಶದಂತೆ ಬೆಳಿಗ್ಗೆ 8 ಗಂಟೆಗೆ ಕಚೇರಿ ಮೇಲೆ ರಾಷ್ಟ್ರ ಧ್ವಜ ಹಾರಿಸಿ ವಂದನೆ ಸಲ್ಲಿಸ ಬೇಕಿತ್ತು.  ಆದರೆ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮತ್ತು ನೌಕರರು ಸಮಯ 9.25 ಆದರೂ ಧ್ವಜ ಹಾರಿಸದೇ ಸರ್ಕಾರಿ ಆದೇಶವನ್ನು ಗಾಳಿಗೆ ತೂರಿರುವುದನ್ನು ನಾಗರಿಕರು ಪೋಟೊ ತೆಗೆದು ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ತರಾತುರಿಯಲ್ಲಿ ರಾಷ್ಟ್ರ ಧ್ವಹ ಹಾರಿಸಲು ಮುಂದಾಗಿದ್ದಾರೆ. ಗ್ರಾಪಂ ಆಡಳಿತ ಮಂಡಳಿ ಅಧಿಕಾರಿಗಳ ವರ್ಗ ಮತ್ತು ಸ್ಥಳೀಯ ಸದಸ್ಯರ ನಡುವೆ ಹೊಂದಾಣಿಕೆ ಕೊರತೆಯಿಂದ ರಾಷ್ಟ್ರಧ್ವಜ ಹಾರಿಸಲು ವಿಳಂಬವಾಗಿರುವುದಾಗಿ ತಿಳಿದು ಬಂದಿದೆ. ಅಧಿಕಾರಿಗಳು ಮತ್ತು ಸದಸ್ಯರು ಪಂಚಾಯ್ತಿ ಅಭಿವೃದ್ದಿ ವಿಚಾರ ಸೇರಿದಂತೆ ಇನ್ನಿತರೆ ಕೆಲಸ ಕಾರ್ಯಗಳು ವಿಳಂಬ ನೀತಿ ಹಾಗೂ ಮೆದು ಧೋರಣೆಯಿಂದ ಸದಸ್ಯರು ಮತ್ತು ಅಧಿಕಾರಿಗಳ ನಡುವೆ ಸಂಘರ್ಷ ಉಂಟಾಗಿದ್ದು, ಕಚೇರಿ ಬೀಗದ ಕೀ ಅಧಿಕಾರಿಗಳ ಬಳಿ ಇರಲಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )