ಕೌಟುಂಬಿಕ ಕಲಹದಿಂದ ತಾಯಿ-ಮಗಳು ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

susidei

ಚಿಕ್ಕಬಳ್ಳಾಪುರ, ನ.16- ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮನನೊಂದ ತಾಯಿಯೊಬ್ಬಳು ತನ್ನ ಮಗಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ನಡೆದಿದೆ.  ತಾಲ್ಲೂಕಿನ ಆವುಲನಾಗೇನಹಳ್ಳಿ ಗ್ರಾಮದ ಐಶ್ವರ್ಯ(26) ಹಾಗೂ ರಕ್ಷಿತ (3 ) ಸಾವನ್ನಪ್ಪಿರುವ ತಾಯಿ-ಮಗಳು. ಮೇಲ್ನೋಟಕ್ಕೆ ಕೌಟುಂಬಿಕ ಕಲಹದಿಂದ ಎಂದಾದರೂ ನಿಖರ ಕಾರಣ ಪೊಲೀಸರ ತನಿಖೆಯಿಂದಷ್ಟೆ ಹೊರಬೀಳಬೇಕಿದೆ. ಗುಡಿಬಂಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

Facebook Comments