ರಾಜಕೀಯಕ್ಕೆ ಎಂಟ್ರಿ ಕೊಟ್ಟ ತೆಲುಗು ಹಾಸ್ಯನಟ ವೇಣು ಮಾಧವ್

ಈ ಸುದ್ದಿಯನ್ನು ಶೇರ್ ಮಾಡಿ

Venu-Madhav--01

ಹೈದರಾಬಾದ್,ನ.16- ಖ್ಯಾತ ತೆಲುಗು ನಟ ವೇಣು ಮಾಧವ್ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕೋಡದ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಮಿಮಿಕ್ರಿ ಕಲಾವಿದನಾಗಿ ವೃತ್ತಿ ಜೀವನ ಆರಂಭಿಸಿದ ವೇಣು ಮಾಧವ್ ಹಲವು ಟಿಡಿಪಿ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿರುವ ಅವರು ಟಾಲಿವುಡ್‍ನಲ್ಲಿ ಅತ್ಯಂತ ಜನಪ್ರಿಯ ಹಾಸ್ಯ ಕಲಾವಿದರಾಗಿದ್ದಾರೆ.

ಎನ್ ಟಿಆರ್, ಚಿರಂಜೀವಿ ಹಾಗೂ ಪ್ರಭಾಸ್ ಅವರ ಚಿತ್ರಗಳು ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದು, ಕೋಡದ್‍ನಲ್ಲಿ ಶಿಕ್ಷಣ ಪಡೆದಿರುವ ವೇಣು ಮಾಧವ್ ಅಲ್ಲಿಂದಲೇ ಚುನಾವಣಾ ಅಖಾಡಕ್ಕಿಳಿಯಲಿದ್ದಾರೆ.  ಮಿಮಿಕ್ರಿ ಕಲಾವಿದನಾಗಿ ವೃತ್ತಿ ಜೀವನ ಆರಂಭಿಸಿದ ವೇಣು ಮಾಧವ್ ಅವರು ಹಲವು ಟಿಡಿಪಿ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿ ಜನರನ್ನು ರಂಜಿಸಿದ್ದಾರೆ.

 ಟಾಲಿವುಡ್ ನಲ್ಲಿ ಅತ್ಯಂತ ಜನಪ್ರಿಯ ಹಾಸ್ಯ ಕಲಾವಿದರಾಗಿರುವ ವೇಣು ಮಾಧವ್ ಅವರು ಎನ್ ಟಿಆರ್, ಚಿರಂಜೀವಿ ಹಾಗೂ ಪ್ರಭಾಸ್ ಅವರ ಚಿತ್ರಗಳು ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
Facebook Comments