ರೈತನ ಮೇಲೆ ಚಿರತೆ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Leopardಕೆ.ಆರ್.ಪೇಟೆ, ನ.16- ಕಬ್ಬಿನ ಗದ್ದೆಗೆ ನೀರು ಹಾಯಿಸುವಾಗ ರೈತನ ಮೇಲೆ ಚಿರತೆ ದಾಳಿ ಮಾಡಿದ್ದು, ಅದೃಷ್ಟ ವಶಾತ್ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಿಕ್ಕೇರಿ ಸಮೀಪದ ಚೌಡೇನಹಳ್ಳಿ ಗ್ರಾಮದ ಮಂಜಶೆಟ್ಟಿ (40) ಚಿರತೆ ದಾಳಿಗೆ ಒಳಗಾದ ರೈತ.  ಕಬ್ಬಿನ ಗದ್ದೆಗೆ ನೀರು ಹಾಯಿಸಲು ಹೋದಾಗ ಏಕಾಏಕಿ ಚಿರತೆಯೊಂದು ಮಂಜಶೆಟ್ಟಿ ಮೇಲೆ ದಾಳಿ ನಡೆಸಿದೆ. ಮಂಜಶೆಟ್ಟಿ ಕೂಗಿಕೊಂಡಾಗ ಅಕ್ಕಪಕ್ಕದ ಜಮೀನವರು ದೌಡಾಯಿಸಿ ಚಿರತೆ ಓಡಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಂಜಶೆಟ್ಟಿಯನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಗ್ರಾಮದ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

15 thoughts on “ರೈತನ ಮೇಲೆ ಚಿರತೆ ದಾಳಿ

Comments are closed.