H1N1ಗೆ ಬಲಿಯಾದ ಸ್ಯಾಂಡಲ್‍ವುಡ್‍ನ ನಿರ್ದೇಶಕ ಶಂಕರಲಿಂಗ ಸುಗ್ನಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ

Director--01

ಬೆಂಗಳೂರು,ನ.16- ಮಾರಕ ರೋಗ ಎಚ್1ಎನ್1ಗೆ ಸ್ಯಾಂಡಲ್‍ವುಡ್‍ನ ನಿರ್ದೇಶಕ ಶಂಕರಲಿಂಗ ಸುಗ್ನಳ್ಳಿ(56) ಬಲಿಯಾಗಿದ್ದಾರೆ. ಇವರು ಹೋಲಿ, ವಿಜಯ ಕಂಕಣ ಸೇರಿದಂತೆ ಹಲವು ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕೆಲವು ದಿನಗಳಿಂದ ಎಚ್1ಎನ್1 ರೋಗದಿಂದ ಬಳಲುತ್ತಿದ್ದ ಇವರು ನಗರದ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಅವರ ಅಂತ್ಯ ಸಂಸ್ಕಾರ ಇಂದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸುಗ್ಗನಹಳ್ಳಿಯಲ್ಲಿ ನಡೆಯಿತು.

ಇವರು ಮಹಾದಾಸೋಹಿ ಶರಣ ಬಸವ, ಏಳು ಕೋಟಿ ಮಾರ್ತಾಂಡ ಬೈರವ, ವಿಜಯಕಂಕಣ, ಕಡ್ಲಿಮಟ್ಟಿ ಸ್ಟೇಶನ್ ಮಾಸ್ಟರ್, ಪ್ರೇಮ ದೇವತೆ, ಅಡ್ನಾಡಿ ಅಳಿಯ ಸೇರಿದಂತೆ ಹಲವು ಉತ್ತಮ ಚಿತ್ರಗಳನ್ನು ನಿರ್ದೇಶಿಸಿದ್ದರು. ನಟಿ ರಾಗಿಣಿ ದ್ವಿವೇದಿಯಂತಹ ಸ್ಟಾರ್ ಅನ್ನು ‘ಹೋಲಿ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ಅವರಿಗೆ ಇದೆ. ಅವರ ಅಗಲಿಕೆಗೆ ಅವರ ಚಿತ್ರರಂಗ ಮಿತ್ರರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಅವರ ನಿರ್ದೇಶನದ ಕನ್ನಡ ಚಲನಚಿತ್ರಗಳು :
ಮಹಾದಾಸೋಹಿ ಶರಣ ಬಸವ , ಏಳು ಕೋಟಿ ಮಾರ್ತಾಂಡ ಬೈರವ, ವಿಜಯಕಂಕಣ, ಕಡ್ಲಿಮಟ್ಟಿ ಸ್ಟೇಶನ್, ಮಾಸ್ಟರ್, ಪ್ರೇಮ ದೇವತೆ, ಕತೆಯಾದ ಕಾಳ-ಇದು ಚಿತ್ರ ರಾಜ್ಯ ಪ್ರಶಸ್ತಿಯನ್ನು ಗೆದ್ದಿದೆ, ಹೋಳಿ, ಅದ್ನಾಡಿ ಅಳಿಯ, ಶ್ರಿ ಕಾಡಸಿದ್ದೇಶ್ವರ ಮಹಿಮೆ, ಶ್ರಿ ಪಕ್ಕೀರೇಶ್ವರ ಮಹತ್ಮ, ಮಹಾಯೊಗಿ ಮಹಾದೇವ ವಿಜಯ, ಹಾಗೂ   ಕಾಡು ನಮ್ಮ ನಾಡು, ಶ್ರಿ ಗುರು ಕೊಟ್ಟೂರೇಶ್ವರ ಚಿತ್ರಗಳು ಇನ್ನೂ ಬಿಡುಗಡೆಯಾಗಬೇಕಿದೆ.

Facebook Comments