ಮಟನ್‍ ಸಾರು ಮಾಡಲು ತಡ ಮಾಡಿದ ಪತ್ನಿ, ರೊಚ್ಚಿಗೆದ್ದು ಮಗಳನ್ನು ಕೊಂದ ಪಾಪಿ ಪತಿ..!

ಈ ಸುದ್ದಿಯನ್ನು ಶೇರ್ ಮಾಡಿ

Murder--01

ಪಾಟ್ನಾ, ನ.16- ಮಟನ್ ಸಾರು ಮಾಡಲು ಪತ್ನಿ ವಿಳಂಬ ಮಾಡಿದ ಕಾರಣ ಕೋಪಗೊಂಡ ಕ್ರೂರ ಪತಿ ತನ್ನ ನಾಲ್ಕು ವರ್ಷದ ಮಗಳನ್ನು ನೆಲಕ್ಕೆ ಬಡಿದು ಕೊಂದಿರುವ ಅಮಾನುಷ ಘಟನೆ ಬಿಹಾರದಲ್ಲಿ ನಡೆದಿದೆ. ಫಕ್ರಿಟೋಲಿ ಗ್ರಾಮದ ಶಂಬು ಲಾಲ್ ಶರ್ಮಾ ತನ್ನ ನಾಲ್ಕು ವರ್ಷದ ಮಗಳಾದ ಶಾಲು ಕುಮಾರಿಯನ್ನು ಬಡಿದು ಕೊಂದಿರುವ ಪಾಪಿ.

ಗಾಯಗೊಂಡ ಮಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲೇಗಲೇ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತನನ್ನು ಪೊ ಲೀಸರು ಬಂಧಿಸಿದ್ದಾರೆ. ಹೆಂಡತಿ ತನಗಾಗಿ ಮಟನ್ ಸಾರು ಬೇಗ ಮಾಡಲಿಲ್ಲ ಎಂಬ ಕಾರಣಕ್ಕೆ ಪತ್ನಿ ರಾಜಕುಮಾರಿ ದೇವಿ ಜತೆ ವಾಗ್ವಾದಕ್ಕಿಳಿದಿದ್ದ. ಇಬ್ಬರ ನಡುವೆ ಜಗಳವಾಗುತ್ತಿತ್ತು. ಈ ವೇಳೆ ಪಕ್ಕದಲ್ಲೇ ಆಟವಾಡುತ್ತಿದ್ದ ನಾಲ್ಕು ವರ್ಷದ ಮಗಳ ಕುತ್ತಿಗೆ ಹಿಡಿದೆಳೆದು ನಾಲ್ಕೈದು ಬಾರಿ ನೆಲಕ್ಕೆ ಬಡಿದಿದ್ದಾನೆ ಎಂದು ಪೊ ಲೀಸರು ತಿಳಿಸಿದ್ದಾರೆ.

ಪ್ರಜ್ಞಾಹೀನಳಾಗಿ ಬಿದ್ದಿದ್ದ ಮಗಳನ್ನು ಕೂಡಲೇ ಶರ್ಮ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಷ್ಟರಲ್ಲೇಗಲೇ ಮಗು ಸಾವನ್ನಪ್ಪಿತ್ತು. ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಕ್ರೂರ ಪೊ ೀಷಕರು ಮಕ್ಕಳ ಮೇಲೆ ಹಿಂಸಾಚಾರ ಎಸಗುತ್ತಿರುವ ಪ್ರಕರಣಗಳ ನಡುವೆ ನಡೆದ ಈ ಹತ್ಯೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

Facebook Comments

Sri Raghav

Admin