ಯುವಕನನ್ನು ಅಪಹರಿಸಿ ಕೊಂದ ಉಗ್ರರು

ಈ ಸುದ್ದಿಯನ್ನು ಶೇರ್ ಮಾಡಿ

terarstಕಾಶ್ಮೀರ,ನ.16- ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಪುಲ್ವಾಮಾ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಯುವಕನನ್ನು ಅಪಹರಿಸಿ ಉಗ್ರರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಸೋಫಿಯಾ ಜಿಲ್ಲೆಯ ಸಫ್ನಾಗ್ರಿ ನಿವಾಸಿ ನದೀಮ್ ಮಂಜೂರು ಕೊಲೆಯಾಗಿರುವ ಯುವಕ. ಉಗ್ರರು ನದೀಮ್ ಮಂಜೂರುನನ್ನು ನಿನ್ನೆ ರಾತ್ರಿ ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಗುಂಡಿಕ್ಕಿ ಹತ್ಯೆ ಮಾಡಿದ್ದು, ನದೀಮ್ ಶವವು ಪುಲ್ವಾಮ್ ಜಿಲ್ಲೆಯ ಕಿಲೋರ ಪ್ರದೇಶದಲ್ಲಿ ಪತ್ತೆಯಾಗಿದೆ.  ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಉಗ್ರರು ಗುಂಡಿಕ್ಕಿ ಕೊಲೆ ಮಾಡಿದ್ದಾರೆ ಎಂದು ಪುಲ್ವಾಮಾ ಜಿಲ್ಲೆಯ ಕಿಲೋರ್ ಪೊಲೀಸರು ತಿಳಿಸಿದ್ದಾರೆ.

Facebook Comments