ಆಂಬಿಡೆಂಟ್ ಮಾದರಿಯ ಮತ್ತೊಂದು ಹಗರಣ ಬೆಳಕಿಗೆ..!

ಈ ಸುದ್ದಿಯನ್ನು ಶೇರ್ ಮಾಡಿ

Fraud--012

ಬೆಂಗಳೂರು, ನ.17-ಹೂಡಿಕೆದಾರರಿಗೆ ಆಂಬಿಡೆಂಟ್ ಕಂಪೆನಿ ವಂಚಿಸಿದ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ನಗರದಲ್ಲಿ ಮತ್ತೊಂದು ಇಂಥದ್ದೇ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. ಅಜ್ಮೀರ್ ಹೆಸರಿನಲ್ಲಿ ಸಾವಿರಾರು ಮಂದಿಯಿಂದ 100 ಕೋಟಿ ರೂ.ಗೂ ಅಧಿಕ ಹೂಡಿಕೆ ಹಣ ಪಡೆದು ಹಿಂದಿರುಗಿಸದ ಬಗ್ಗೆ ಈಗ ಆರೋಪ ಕೇಳಿ ಬಂದಿದೆ.

ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕೇಂದ್ರ ಕಚೇರಿಯ ಎದುರು ಇಂದು ಬೆಳಗ್ಗೆ ಹಣ ಕಳೆದುಕೊಂಡ 50ಕ್ಕೂ ಅಧಿಕ ಸಂತ್ರಸ್ತರು ಪ್ರತಿಭಟನೆ ನಡೆಸಿದ್ದಾರೆ. ಅಜ್ಮೀರ್ ಎಂಬ ಹೆಸರಿನ ಹೂಡಿಕೆ ಸಂಸ್ಥೆ ಸ್ಥಾಪಿಸಿದ್ದ ತಬ್ರೇಜ್ ಎಂಬುವರು ಹಣ ನೀಡದೆ ವಂಚಿಸಿದ್ದಾರೆ. ಆಂಬಿಡೆಂಟ್ ವಂಚನೆ ಪ್ರಕರಣ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ತಕ್ಷಣ ತಬ್ರೇಜ್‍ನನ್ನು ವಶಕ್ಕೆ ಪಡೆದು ನಮ್ಮ ಹಣ ಹಿಂದಿರುಗಿಸಬೇಕು ಎಂದು ಸಂತ್ರಸ್ತರು ಒತ್ತಾಯಿಸಿದ್ದಾರೆ.

ಪ್ರಭಾವಿ ರಾಜಕೀಯ ವ್ಯಕ್ತಿಗಳೊಂದಿಗೆ ನಂಟು ಹೊಂದಿರುವ ತಬ್ರೇಜ್ ಅಜ್ಮೇರ್ ಎಂಬ ಪವಿತ್ರ ಯಾತ್ರಾ ಸಂಸ್ಥೆಯ ಹೆಸರಿನಲ್ಲಿ ಹೂಡಿಕೆ ಸಂಸ್ಥೆ ಮಾಡಿದ್ದಾರೆ. ಈಗಾಗಲೇ ಈ ಬಗ್ಗೆ ಸಿಸಿಬಿ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಇದುವರೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸಂತ್ರಸ್ಥರಿಂದ ಮನವಿ ಸ್ವೀಕರಿಸಿದ ಸಿಸಿಬಿ ಪೊಲೀಸರು, ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಕಳುಹಿಸಿದ್ದಾರೆ.

Facebook Comments

Sri Raghav

Admin