ಒಂಟಿ ಮಹಿಳೆ ಕೊಲೆ ಮಾಡಿದ್ದ ಕೊಡಗು ಮೂಲದ ವ್ಯಕ್ತಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

cremiಬೆಂಗಳೂರು, ನ.17- ಗಾರ್ಮೆಂಟ್ಸ್ ವೊಂದರ ಮಹಿಳಾ ಸೂಪರ್‍ವೈಸರ್‍ರನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಕೊಡಗು ಮೂಲದ ವ್ಯಕ್ತಿಯನ್ನು ಆರ್‍ಎಂಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.  ಮೂಲತಃ ಸೋಮವಾರಪೇಟೆ ತಾಲೂಕಿನ ರಮೇಶ್ (48) ಬಂಧಿತ ಆರೋಪಿ. ಲಗ್ಗೆರೆಯ ಚೌಡೇಶ್ವರಿ ನಗರದಲ್ಲಿ ವಾಸವಾಗಿದ್ದ ಈತ ಗಾರ್ಮೆಂಟ್ಸ್‍ವೊಂದರಲ್ಲಿ ವರ್ಕ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾಗ ಸೂಪರ್‍ವೈಸರ್ ಆಗಿದ್ದ ರುಕ್ಮಿಣಮ್ಮ ಎಂಬುವರ ಪರಿಚಯವಾಗಿ ಆಕೆಯೊಂದಿಗೆ ಸಂಬಂಧ ಹೊಂದಿದ್ದನು ಎನ್ನಲಾಗಿದೆ.

ರುಕ್ಮಿಣಮ್ಮ ಗೊರಗುಂಟೆಪಾಳ್ಯದ 4ನೆ ಕ್ರಾಸ್, 4ನೆ ಬ್ಲಾಕ್‍ನಲ್ಲಿ ಒಂಟಿಯಾಗಿ ವಾಸವಾಗಿದ್ದರು. ಇವರೊಂದಿಗೆ ಸಲುಗೆಯಿಂದಿದ್ದ ರಮೇಶ್ ಹಣದ ವ್ಯವಹಾರ ಮಾಡಿದ್ದನು. ಈ ವಿಚಾರವಾಗಿ ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿತ್ತು. ಅ.25ರಂದು ರುಕ್ಮಿಣಮ್ಮ ಮನೆಗೆ ಬಂದಿದ್ದ ರಮೇಶ್ ಹಣದ ವಿಚಾರವಾಗಿ ಜಗಳವಾಡಿ ಕೊಲೆಗೈದು ಚಿನ್ನಾಭರಣ ಹಾಗೂ ಮೊಬೈಲ್‍ನೊಂದಿಗೆ ಪರಾರಿಯಾಗಿದ್ದನು.

ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಆರ್‍ಎಂಸಿ ಯಾರ್ಡ್ ಠಾಣೆ ಪೊಲೀಸರು ಯಶವಂತಪುರ ಉಪವಿಭಾಗದ ಎಸಿಪಿ ರವಿಪ್ರಸಾದ್, ಇನ್ಸ್‍ಪೆಕ್ಟರ್ ಮಹಮ್ಮದ್ ಮುಕಾರಾಮ್ ನೇತೃತ್ವದಲ್ಲಿ ಸಬ್‍ಇನ್ಸ್‍ಪೆಕ್ಟರ್‍ಗಳಾದ ರಘುಪ್ರಸಾದ್ ಮತ್ತು ಹನುಮಂತರಾಯಪ್ಪ ಹಾಗೂ ಸಿಬ್ಬಂದಿಯೊಂದಿಗೆ ತನಿಖೆ ನಡೆಸಿ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments