ಪ್ರಧಾನಿ ಮೋದಿಗೆ ಚಿದಂಬರಂ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

Chidambaram--01ನವದೆಹಲಿ, ನ.17- ನೆಹರೂ, ಗಾಂಧಿ ಕುಟುಂಬದವರನ್ನು ಹೊರತುಪಡಿಸಿ ಬೇರೆಯವರನ್ನು ಐದು ವರ್ಷಗಳ ಕಾಲ ಎಐಸಿಸಿ ಅಧ್ಯಕ್ಷರನ್ನಾಗಿಸುವಂತೆ ಸವಾಲು ಹಾಕಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಚಿದಂಬರಂ ತರಾಟೆಗೆ ತೆಗೆದುಕೊಂಡಿದ್ದಾರೆ. 1947ರ ನಂತರ ನೆಹರೂ ಮತ್ತು ಗಾಂಧಿ ಕುಟುಂಬದವರಲ್ಲದ 15 ಮಂದಿ ಮುಖಂಡರು ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಚಿದು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ತಿಳಿಸಿದ್ದಾರೆ.

ಆಚಾರ್ಯ ಕೃಪಾಲನಿ, ಪಟ್ಟಾಭಿ ಸೀತಾರಾಮಯ್ಯ, ಪುರುಷೋತ್ತಮ ದಾಸ್ ತಂಡನ್, ದೇಬರ್ ಸಂಜೀವ್‍ರೆಡ್ಡಿ, ಸಂಜೀವಯ್ಯ, ಕಾಮರಾಜ್, ಎಸ್.ನಿಜಲಿಂಗಪ್ಪ, ಡಿ.ಸುಬ್ರಹ್ಮಣ್ಯನ್, ಜಗಜೀವನರಾಂ, ಡಾ.ಶಂಕರ್ ದಯಾಳ್ ಶರ್ಮಾ, ಡಿ.ಕೆ.ಬರುವಾ, ಬ್ರಹ್ಮನಂದರೆಡ್ಡಿ, ಪಿ.ವಿ.ನರಸಿಂಹರಾವ್ ಮತ್ತು ಸೀತಾರಾಮ ಕೇಸರಿ ಇವರೆಲ್ಲರೂ ಕಾಂಗ್ರೆಸ್ ಅಧ್ಯಕ್ಷರಾಗಿರುವುದು ಪಕ್ಷದ ನಿಸ್ವಾರ್ಥ ಧೋರಣೆಯನ್ನು ತೋರಿಸುತ್ತದೆ. ಈ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿರುವ ಮೋದಿಯವರ ಕ್ರಮ ಸರಿಯಲ್ಲ ಎಂದು ಚಿದು ಟೀಕಿಸಿದ್ದಾರೆ.

Facebook Comments