ಪತ್ರಕರ್ತ ಖಷೋಗ್ಗಿ ಹತ್ಯೆ ಹಿಂದೆ ಸೌದಿ ರಾಜಕುಮಾರನ ಕೈವಾಡ

ಈ ಸುದ್ದಿಯನ್ನು ಶೇರ್ ಮಾಡಿ

uaeವಾಷಿಂಗ್ಟನ್, ನ.17 (ಪಿಟಿಐ)- ಹಿರಿಯ ಪತ್ರಕರ್ತ ಮತ್ತು ಅಂಕಣಕಾರ ಜಮಾಲ್ ಖಷೋಗ್ಗಿ ಹತ್ಯೆ ಹಿಂದೆ ಸೌದಿ ಅರೇಬಿಯಾದ ಪ್ರಭಾವಿ ರಾಜಕುಮಾರ ಮಹಮದ್ ಬಿನ್ ಸಲ್ಮಾನ್ ಕೈವಾಡ ಇರುವುದು ಸುಸ್ಪಷ್ಟವಾಗಿದೆ ಎಂದು ಅಮೆರಿಕದ ಕೇಂದ್ರೀಯ ತನಿಖಾ ದಳ ಸಿಐಎ(ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ) ಹೇಳಿದೆ.

ಸೌದಿ ರಾಜಕುಮಾರನ ದುರಾಡಳಿತ ಮತ್ತು ಅವ್ಯವಹಾರ-ಅಪಕೃತ್ಯಗಳ ಬಗ್ಗೆ ತಮ್ಮ ಅಂಕಣಗಳಲ್ಲಿ ತೀಕ್ಷ್ಣ ಟೀಕೆಗಳನ್ನು ಮಾಡುತ್ತಿದ್ದ ಖಷೋಗ್ಗಿ ಅವರನ್ನು ಮಾತುಕತೆ ನೆಪದಲ್ಲಿ ಟರ್ಕಿಗೆ ಕರೆಸಿಕೊಂಡು ಕೊಂದು ಹಾಕಿ ಆಸಿಡ್‍ನಲ್ಲಿ ಅವರ ಮೃತದೇಹವನ್ನು ಕರಗಿಸಿ ಮೋರಿಗೆ ಚೆಲ್ಲಿದ್ದಾರೆ ಎಂಬ ಅಂಶವನ್ನು ಸಿಐಎ ತನ್ನ ತನಿಖಾ ವರದಿಯಲ್ಲಿ ಪುನರುಚ್ಛರಿಸಿದೆ. ಒಟ್ಟಾರೆ ಸೌದಿಯ ಹಿರಿಯ ಪತ್ರಕರ್ತ ಮತ್ತು ವಾಷಿಂಗ್ಟನ್ ಪೋಸ್ಟ್ ಅಂಕಣಕಾರ ಖಷೋಗ್ಗಿ ಹತ್ಯೆ ಹಿಂದೆ ಮಹಮದ್ ಬಿನ್ ಸಲ್ಮಾನ್ ಕೈವಾಡ ಇದೆ ಎಂದು ಸಿಎಐ ಸ್ಪಷ್ಟಪಡಿಸಿದೆ.

Facebook Comments