ತ್ರಿಪುರ ಮಾಜಿ ಸಿಎಂ ಮಾಣಿಕ್ ಸರ್ಕಾರ್ ವಾಹನದ ಮೇಲೆ ಅಪರಿಚಿತರ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Tripura--01
ಅಗರ್ತಲ, ನ. 17-ತ್ರಿಪುರಾದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಹಾಗೂ ಹಿರಿಯ ಸಿಪಿಎಂ ಮುಖಂಡರ ಬೆಂಗಾವಲು ವಾಹನದ ಮೇಲೆ ಅಪರಿಚಿತರು ದಾಳಿ ನಡೆಸಿರುವ ಘಟನೆ ಸಿಪಾಹಿಜಾಲ ಜಿಲ್ಲೆಯ ರಾಷ್ಟ್ರರ್‍ಮಠ ಎಂಬಲ್ಲಿ ನಡೆದಿದೆ.

ಪಕ್ಷದ ಬಿಶಾಲ್‍ಗಢ ಕಚೇರಿಯಲ್ಲಿ ನವೆಂಬರ್ ಕ್ರಾಂತಿಯ ಆಚರಣೆ ಸಂಬಂಧ ನಡೆದ ಸಭೆಯೊಂದರಲ್ಲಿ ಭಾಗವಹಿಸಿ ನಿನ್ನೆ ಸಂಜೆ ರಾಜಧಾನಿಗೆ ವಾಪಸ್ಸಾಗುತ್ತಿದ್ದಾಗ ಅಪರಿಚಿರತರು ವಾಹನ ತಡೆದು ದಾಳಿ ನಡೆಸಿದ್ದಾರೆ.  ಶಾಸಕ ನಾರಾಯಣ ಚೌಧರಿಯ ಇಬ್ಬರು ಬೆಂಬಲಿಗರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೆಲ ಬೆಂಗಾವಲು ವಾಹನಗಳು ಜಖಂಗೊಂಡಿವೆ.

ಇದು ಪ್ರಜಾಪ್ರಭುತ್ವ ವಿರೋಧಿ ಹಾಗೂ ಫ್ಯಾಸಿಸ್ಟ್ ಕೃತ್ಯ ಎಂದು ಖಂಡಿಸಿರುವ ಸಿಪಿಎಂ, ಇದರಲ್ಲಿ ಬಿಜೆಪಿ ಬೆಂಬಲಿತ ಗೂಂಡಾಗಳ ಕೈವಾಡ ಇದೆ ಎಂದು ಆರೋಪಿಸಿದೆ. ಸರ್ಕಾರ್ ಅವರ ಜೊತೆ ಸಿಪಿಎಂ ಮುಖಂಡರಾದ ಮಾಜಿ ಹಣಕಾಸು ಸಚಿವ ಭನೂಲಾಲ್ ಸಹಾ, ಸೊನಮುರಾ ಶಾಸಕ ಶ್ಯಾಮಲ್ ಚಕ್ರವರ್ತಿ, ಅಲ್ಪಸಂಖ್ಯಾತರ ಖಾತೆ ಮಾಜಿ ಸಚಿವ ಶಾಹೀದ್ ಚೌಧರಿ ಮತ್ತು ಕಮಲಸಾಗರ ಶಾಸಕ ನಾರಾಯಣ ಚೌಧರಿ ಇದ್ದರು.

ಇಂಥ ಘಟನೆ ಗಮನಕ್ಕೆ ಬಂದಿಲ್ಲ ಎಂದು ಬಿಜೆಪಿ ವಕ್ತಾರ ಡಾ. ಅಶೋಕ್ ಸಿನ್ಹಾ ಹೇಳಿದ್ದು, ಅಂಥ ಘಟನೆ ನಡೆದಿದ್ದರೆ ಅದು ಖೇದಕರ. ತಪ್ಪಿತಸ್ಥರಿಗೆ ಸರ್ಕಾರ ಸೂಕ್ತ ಶಿಕ್ಷೆ ನೀಡಲಿದೆ ಎಂದು ಹೇಳಿದ್ದಾರೆ.

Facebook Comments

Sri Raghav

Admin