ಇಂದಿರಾ ಕ್ಯಾಂಟಿನ್‍ಗೆ ಶಾಸಕರ ದಿಢೀರ್ ಭೇಟಿ, ಪರಿಶೀಲನೆ

ಈ ಸುದ್ದಿಯನ್ನು ಶೇರ್ ಮಾಡಿ

lingeshae jdsಬೇಲೂರು, ನ.17- ಇಲ್ಲಿನ ಇಂದಿರಾ ಕ್ಯಾಂಟಿನ್‍ಗೆ ದಿಢೀರ್ ಭೇಟಿ ನೀಡಿದ ಶಾಸಕ ಕೆ.ಎಸ್.ಲಿಂಗೇಶ್, ಸಾರ್ವಜನಿಕರೊಂದಿಗೆ ಇಂದಿರಾ ಕ್ಯಾಂಟಿನ್‍ನಲ್ಲಿ ಉಪಹಾರ ಸೇವಿಸಿ ಇನ್ನೂ ಹೆಚ್ಚಿನ ಶುಚಿ-ರುಚಿಯಾಗಿ ಮಾಡಬೇಕು ಎಂದು ಕ್ಯಾಂಟಿನ್ ವ್ಯವಸ್ಥಾಪಕರಿಗೆ ಹೇಳಿದರು. ಇಂದಿರಾ ಕ್ಯಾಂಟೀನ್‍ಗೆ ಆಗಮಿಸಿದ ಶಾಸಕರು ಕ್ಯಾಂಟಿನ್‍ಲ್ಲಿದ್ದ ಉಪಹಾರ ಹಾಗೂ ಉಪಹಾರಕ್ಕೆ ಉಪಯೋಗಿಸುವ ಪದಾರ್ಥಗಳನ್ನು ವೀಕ್ಷಿಸಿದರು. ನಂತರ ಕ್ಯಾಂಟಿನ್‍ನಲ್ಲಿ ಉಪಹಾರ ಸೇವಿಸುತ್ತಿದ್ದ ಸಾರ್ವಜನಿಕರಲ್ಲಿ ಕ್ಯಾಂಟಿನ್ ಮಾಡುತ್ತಿರುವ ಉಪಹಾರ ಹಾಗೂ ಊಟದ ಬಗ್ಗೆ ವಿಚಾರಿಸಿದರು. ನಂತರ ಶಾಸಕರು ಸಹ ಹಣ ಕೊಟ್ಟು ರಶೀದಿ ಪಡೆದು ಸರದಿ ಸಾಲಿನಲ್ಲೆ ಉಪಹಾರ ಪಡೆದು ಸಾರ್ವಜನಿಕರೊಂದಿಗೆ ಸೇವಿಸಿದ್ದು ವಿಶೇಷವಾಗಿತ್ತು.

ನಂತರ ಮಾತನಾಡಿದ ಶಾಸಕ ಕೆ.ಎಸ್.ಲಿಂಗೇಶ್, ಇಂದಿರಾ ಕ್ಯಾಂಟಿನ್ ಪ್ರಾರಂಭಿಸಿರುವುದರಿಂದ ಗ್ರಾಮಾಂತರ ಪ್ರದೇಶದಿಂದ ಬೇಲೂರಿಗೆ ಬೆಳ್ಳಂಬೆಳಗ್ಗೆಯೇ ಆಗಮಿಸುವ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ವಾಹನಗಳ ಚಾಲಕರು, ನಿರ್ವಾಹಕರು ಹಾಗೂ ಬೇಲೂರಿನಲ್ಲಿ ವಿವಿಧ ಕೆಲಸ-ಕಾರ್ಯಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಉಪಹಾರ ಹಾಗೂ ಮಧ್ಯಾಹ್ನ-ರಾತ್ರಿ ಊಟ ಸಿಗುತ್ತಿರುವುದು ಸಾಕಷ್ಟು ಜನರಿಗೆ ಅನುಕೂಲವಾಗುತ್ತಿದೆ.

ಇಂದಿರಾ ಕ್ಯಾಂಟಿನ್‍ನಲ್ಲಿ ಉತ್ತಮ ಗುಣಮಟ್ಟದ ಅಹಾರ ಪದಾರ್ಥಗಳನ್ನು ಬಳಸಬೇಕು. ಕ್ಯಾಂಟಿನ್‍ಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ. ಅಂಗವಿಕಲರು ಬಂದ ಸಂದರ್ಭದಲ್ಲಿ ಅವರಿದ್ದಲ್ಲಿಗೆ ಉಪಹಾರ ತಲುಪಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಕ್ಯಾಂಟಿನ್ ಸುತ್ತಲೂ ಸ್ವಚ್ಛತೆ ಕಾಪಾಡಿ, ಶುದ್ಧ ನೀರನ್ನು ಕುಡಿಯಲು ವ್ಯವಸ್ಥೆ ಮಾಡಬೇಕು. ಉಪಹಾರ ಮತ್ತು ಸಾಂಬರ್‍ಗೆ ತಾಜಾತರಕಾರಿಗಳನ್ನು ಬಳಸಬೇಕು ಹಾಗೂ ಕ್ಯಾಂಟೀ=ನ್‍ಗೆ ಬರುವ ಯಾರನ್ನೂ ವಾಪಸ್ ಕಳುಹಿಸದೆ ಎಲ್ಲರಿಗೂ ಉಪಹಾರ, ಊಟ ಕೊಟ್ಟು ಸಹಕರಿಸಬೇಕು ಎಂದು ತಿಳಿಸಿದರು.

Facebook Comments