ಕರ್ನಾಟಕದಿಂದ ಶಬರಿಮಲೆಗೆ ಹೋಗುವ ಭಕ್ತರಿಗೆ ಗುಡ್ ನ್ಯೂಸ್

ಈ ಸುದ್ದಿಯನ್ನು ಶೇರ್ ಮಾಡಿ

Ayyappa--01

ಬೆಂಗಳೂರು, ನ.17- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‍ಆರ್‍ಟಿಸಿ) ರಾಜ್ಯದ ಅಯ್ಯಪ್ಪ ಭಕ್ತರಿಗಾಗಿ ಶಬರಿ ಮಲೆ (ಪಂಪಾಗೆ)ಗೆ ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಡಿ.1ರಿಂದ ರಾಜಹಂಸ ಹಾಗೂ ವೋಲ್ವೋ ಬಸ್ ಸೇವೆಯನ್ನು ಶಾಂತಿನಗರ ಬಸ್ ನಿಲ್ದಾಣದಿಂದ ಆರಂಭಿಸುಲಾಗುತ್ತಿದ್ದು , ಈಗಾಗಲೇ ಮುಂಗಡ ಆಸನಗಳ ಕಾಯ್ದಿರಿಸುವಿಕೆಗೆ ಅವಕಾಶ ಕಲ್ಪಿಸಲಾಗಿದೆ.

ರಾಜಹಂಸ ಬಸ್ ಬೆಳಗ್ಗೆ ಮಧ್ಯಾಹ್ನ 1 ಗಂಟೆಗೆ ಹೊರಟು ಮರು ದಿನ 8.15 ನಿಮಿಷಕ್ಕೆ ಪಂಪಾ ತಲುಪಲಿದ್ದು , ನಂತರ ಅದೇ ದಿನ ಸಂಜೆ 5 ಗಂಟೆಗೆ ಅದೇ ವಾಹನ ಬೆಂಗಳೂರಿನತ್ತ ಹೊರಟು ಮರು ದಿನ ಮಧ್ಯಾಹ್ನ 12 ಗಂಟೆಗೆ ತಲುಪಲಿದೆ. ಇದಕ್ಕೆ 940 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ.

ಇನ್ನು ವೋಲ್ವೋ ಬಸ್ ಟಿಕೆಟ್ ದರವನ್ನು 1250 ರೂ.ಗೆ ನಿಗದಿ ಪಡಿಸಲಾಗಿದ್ದು, ಮಧ್ಯಾಹ್ನ 12 ಗಂಟೆಗೆ ಶಾಂತಿನಗರ ಬಸ್ ನಿಲ್ದಾಣದಿಂದ ಹೊರಟು ಬೆಳಗ್ಗೆ 6.45ಕ್ಕೆ ಪಂಪಾ ತಲುಪಲಿದೆ. ಅದೇ ದಿನ ಸಂಜೆ 6 ಗಂಟೆಗೆ ಹೊರಟು ಬೆಳಗ್ಗೆ 9.45ಕ್ಕೆ ತಲುಪಲಿದೆ.

Facebook Comments

Sri Raghav

Admin