ಬೆಂಗಳೂರು ಹೊರ ವಲಯದದಲ್ಲಿ ಒತ್ತುವರಿಯಾಗಿದ್ದ 4.10 ಎಕರೆ ಅರಣ್ಯ ಭೂಮಿ ವಶ

ಈ ಸುದ್ದಿಯನ್ನು ಶೇರ್ ಮಾಡಿ

land-acquisition

ಬೆಂಗಳೂರು,ನ.17- ನಗರದ ಪ್ರಭಾವಿ ಒಬ್ಬರಿಂದ ಅಕ್ರಮವಾಗಿ ಒತ್ತುವರಿ ಯಾಗಿದ್ದ 8 ಕೋಟಿ ರೂ. ಮೌಲ್ಯದ 4.10 ಎಕರೆ ಅರಣ್ಯ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ. ಬನ್ನೇರುಘಟ್ಟದ ಕಗ್ಗಲಿಪುರ ರಸ್ತೆಯಲ್ಲಿರುವ ಬೂತನಹಳ್ಳಿ ಬಳಿ ಒತ್ತುವರಿ ಮಾಡಿಕೊಂಡಿದ್ದ ಅರಣ್ಯ ಭೂಮಿಯನ್ನು ಕಾರ್ಯಾಚರಣೆ ನಡೆಸಿದ ಎಸಿಎಫ್ ರವೀಂದ್ರ ನೇತೃತ್ವದ ತಂಡವು ತೆರವುಗೊಳಿಸಿದೆ. ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಫಾರ್ಮ್‍ಹೌಸ್ ನಿರ್ಮಾಣ ಮಾಡಿ ಕೃಷಿ ಮಾಡಲಾಗುತ್ತಿತ್ತು. ಹೈಕೋರ್ಟ್ ಆದೇಶದ ಮೇರೆಗೆ ಬನ್ನೇರುಘಟ್ಟ ಪೊಲೀಸರು, ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಒತ್ತುವರಿ ಜಾಗವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Facebook Comments

Sri Raghav

Admin