ಗೊಬ್ಬರದ ಜತೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ಹಿಡಿದ ಪೋಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

pollice loreyಮಧುಗಿರಿ, ನ.17- ಲಾರಿಯಲ್ಲಿ ಗೊಬ್ಬರವನ್ನು ಕಾಣುವಂತೆ ಮಾಡಿ ಕೆಳಗೆ ಅಕ್ರಮವಾಗಿ ಮರಳು ತುಂಬಿ ಸಾಗಿಸುತ್ತಿದ್ದ ಲಾರಿ ಮತ್ತು ಚಾಲಕನನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ತಾಲ್ಲೂಕಿನ ಪುರವರ ಗ್ರಾಮದ ಸಮೀಪ ಗೊಬ್ಬರ ತುಂಬಿ ಹೋಗುತ್ತಿದ್ದ ಲಾರಿಯನ್ನು ಖಚಿತ ಮಾಹಿತಿ ಮೇರೆಗೆ ಸಿಪಿಐ ಅಂಬರೀಶ್ ನೇತೃತ್ವದ ತಂಡ ಲಾರಿ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದಾಗ ಮೇಲೆ ಮಾತ್ರ ಗೊಬ್ಬರವಿದ್ದು, ಕೆಳಗೆ ಮರಳು ತುಂಬಿರುವುದು ಬೆಳಕಿಗೆ ಬಂದಿದೆ.

ಲಾರಿಯು ಬ್ಯಾಲ್ಯದಿಂದ ಬೈರೇನಹಳ್ಳಿ ಮಾರ್ಗವಾಗಿ ಬೆಂಗಳೂರಿಗೆ ಮರಳನ್ನು ಆಕ್ರಮವಾಗಿ ಸಾಗಾಟ ನಡೆಸಲಾಗುತ್ತಿತ್ತೆಂದು ತಿಳಿದು ಬಂದಿದೆ. ಕೆಲ ತಿಂಗಳುಗಳ ಹಿಂದೆ ಉಪ ವಿಭಾಗಾಧಿಕಾರಿಯಾಗಿದ್ದ ಡಾ.ವೆಂಕಟೇಶಯ್ಯ ಕೋಡಿಗೇನಹಳ್ಳಿ ಕೆಲ ಭಾಗದಲ್ಲಿ ಆಕ್ರಮವಾಗಿ ತಲೆ ಎತ್ತಿದ್ದ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದರು. ಅಂದಿನಿಂದ ಇಂದಿನವರೆವಿಗೂ ಮರಳು ಸಾಗಾಟಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದ್ದರಿಂದ ಮರಳು ಲೂಟಿ ಕೋರರು ಇಂತಹ ವಾಮ ಮಾರ್ಗವನ್ನು ಕಂಡು ಕೊಂಡಿದ್ದಾರೆಂದು ಕೋಡಿಗೇನಹಳ್ಳಿ ಪೋಲೀಸರು ತಿಳಿಸಿದ್ದಾರೆ.

Facebook Comments