ತಲೆಮರೆಸಿಕೊಂಡಿರುವ ಮಾಜಿ ಸಚಿವೆ ಮಂಜುವರ್ಮ ಆಸ್ತಿ ಜಪ್ತಿಗೆ ಕೋರ್ಟ್ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

Manju-verma--01
ಪಾಟ್ನಾ/ನವದೆಹಲಿ, ನ.17- ಬಿಹಾರದ ಮುಜಾಫರ್‍ಬಾಲಿಕಾಶ್ರಮದಲ್ಲಿ ನಡೆದ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಮಾಜಿ ಸಚಿವೆ ಮಂಜು ವರ್ಮಾ ಅವರ ಆಸ್ತಿ ಜಪ್ತಿ ಮಾಡುವಂತೆ ಬಿಹಾರದ ಬೆಗುಸರಾಯಿ ಕೋರ್ಟ್ ಆದೇಶಿಸಿದೆ.

ನಾಪತ್ತೆಯಾಗಿರುವ ಮಾಜಿ ಸಚಿವೆಯನ್ನು ಬಂಧಿಸಿದ ಬಿಹಾರ ಪೊಲೀಸರಿಗೆ ಇತ್ತೀಚಿಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಜೆಡಿಯು ನಾಯಕಿ ಮತ್ತು ಮಾಜಿ ಸಚಿವೆ ಮಂಜು ಶರ್ಮಾ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಿತ್ತು.

ಮಂಜು ವರ್ಮಾ ಅವರನ್ನು ಒಂದು ತಿಂಗಳಿಂದ ಪತ್ತೆಮಾಡಲು ಸಾಧ್ಯವಾಗಿಲ್ಲ ಎಂಬುದನ್ನು ಕೇಳಿ ನಮಗೆ ದಿಗ್ಭ್ರಮೆ ಆಗಿದೆ. ಪ್ರಮುಖ ವ್ಯಕ್ತಿಯೊಬ್ಬರನ್ನು ಪತ್ತೆಮಾಡಲು ಏಕೆ ಸಾಧ್ಯವಾಗುತ್ತಿಲ್ಲ ಎಂಬುದರ ಬಗ್ಗೆ ಪೊಲೀಸ್ ಇಲಾಖೆ ನ್ಯಾಯಾಲಯದ ಮುಂದೆ ಸ್ಪಷ್ಟೀಕರಣ ನೀಡಬೇಕು. ಮುಂದಿನ ವಿಚಾರಣೆಗೆ ಪೊಲೀಸ್ ಮಹಾ ನಿರ್ದೇಶಕರು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ತಾಕೀತು ಮಾಡಿದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ನ.27ಕ್ಕೆ ಮುಂದೂಡಿದೆ.

ಶೆಲ್ಟರ್ ಹೋಮ್ ಸಲ್ಸ್ ಹಗರಣದಲ್ಲಿ ತಮ್ಮ ಪತಿಯ ಪಾತ್ರವಿರುವ ಹಿನ್ನೆಲೆಯಲ್ಲಿ ಮಂಜು ವರ್ಮಾ ಅವರು ಕೆಲ ತಿಂಗಳ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ಸಲ್ಲಿಸಿದ್ದರು. ತನಿಖೆಗೆಂದು ಸಿಬಿಐ ಅಧಿಕಾರಿಗಳು ಮಂಜು ವರ್ಮಾ ಅವರ ಪಾಟ್ನಾ ಮತ್ತು ಬೇಗುಸರಾಯಿ ನಿವಾಸದ ಮೇಲೆ ದಾಳಿ ನಡೆಸಿದಾಗ ಅವರ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಈ ವಿಚಾರವಾಗಿ ಮಂಜು ವರ್ಮಾ ಅವರನ್ನು ಬಂಧಿಸಿ ಕರೆತರುವಂತೆ ಸುಪ್ರೀಂಕೋರ್ಟ್ ಬಿಹಾರ ಪೊಲೀಸರಿಗೆ ಸೂಚನೆ ನೀಡಿದೆ.

Facebook Comments

Sri Raghav

Admin