ಅನುಮಾನಸ್ಪದವಾಗಿ ಗೃಹಿಣಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

susideಟಿ.ನರಸೀಪುರ, ನ.17- ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿದ್ಯಾನಗರ ಬಡಾವಣೆ ನಿವಾಸಿ ಸೌಂದರ್ಯ (27) ಸಾವನ್ನಪ್ಪಿರುವ ಮಾಹಿಳೆ. ಮೈಕ್ರೊ ಫೈನಾನ್ಸ್‍ವೊಂದರಲ್ಲಿ ಆಡಿಟರ್‍ಆಗಿ ಕೆಲಸ ನಿರ್ವಯಿಸುತ್ತಿರುವ ಸಂಜು ಎಂಬುವರ ಪತ್ನಿ ಸೌಂದರ್ಯ ಮೂಲತಃ ಹೊಳೆ ನರಸೀಪುರ ತಾಲ್ಲೂಕು ಹರದನಪುರ ಗ್ರಾಮದವರು.

ಕಳೆದ ಎಂಟು ವರ್ಷಗಳ ಹಿಂದೆ ಇವರ ವಿವಾಹ ನಡೆದಿದ್ದು, ದಂಪತಿಗೆ 7 ಹಾಗೂ ಒಂದು ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇಂದು ಎರಡನೇ ಪುತ್ರಿಯ ಹುಟ್ಟುಹಬ್ಬವಿದ್ದು, ತಾಯಿ ಸೌಂದರ್ಯ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ.್ಲ ಕುಟುಂಬದ ಮೂಲಗಳ ಪ್ರಕಾರ ಸೌಂದರ್ಯ ಎರಡು ತಿಂಗಳಿಂದೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ.

Facebook Comments