ದೇಶಪಾಂಡೆ-ಜಗದೀಶ್ ಶೆಟ್ಟರ್ ನಡುವೆ ಮಾತಿನ ಚಕಮಕಿ

ಈ ಸುದ್ದಿಯನ್ನು ಶೇರ್ ಮಾಡಿ

Deshapande----01

ಹುಬ್ಬಳ್ಳಿ, ನ.17- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ನಡುವೆ ಮಾತಿನ ಚಕಮಕಿ ನಡೆಯಿತು.

ನಗರದ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗಿದ್ದು, ಇಂದು ಬೆಳಗ್ಗೆ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಇಂದಿರಾ ಕ್ಯಾಂಟೀನ್ ಹಣ ನೀಡುವ ಕುರಿತು ಮಾತನಾಡುವ ಸಂದರ್ಭದಲ್ಲಿ ಜಗದೀಶ್‍ಶೆಟ್ಟರ್ ಹಾಗೂ ದೇಶಪಾಂಡೆ ನಡುವೆ ಮಾತಿನ ಚಕಮಕಿ ನಡೆಯಿತು.

ಇಂದಿರಾ ಕ್ಯಾಂಟೀನ್ ನಿರ್ವಹಣೆ ಮಾಡಲು ರಾಜ್ಯಸರ್ಕಾರ ಶೇ.30ರಷ್ಟು ಅನುದಾನ ನೀಡಿದರೆ, ಉಳಿದ ಶೇ.70ರಷ್ಟನ್ನು ಮಹಾನಗರ ಪಾಲಿಕೆ ಭರಿಸಬೇಕಿದೆ. ಆದರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆರ್ಥಿಕ ಸಂಕಷ್ಟದಲ್ಲಿ ಇರುವುದರಿಂದ ಈ ಹಣವನ್ನು ಭರಿಸಲು ಸಾಧ್ಯವಿಲ್ಲ ಎಂದು ಜಗದೀಶ್ ಶೆಟ್ಟರ್ ಖಡಕ್ಕಾಗಿ ಹೇಳಿದರು.

ಈ ವೇಳೆ ದೇಶಪಾಂಡೆ ಮಹಾನಗರ ಪಾಲಿಕೆಯಿಂದ ಕೊಡಬೇಕಾದುದನ್ನು ಅವರೇ ಕೊಡಬೇಕು, ಸರ್ಕಾರದ ಪಾಲನ್ನು ಸರ್ಕಾರ ಕೊಡುತ್ತದೆ ಎಂದಾಗ ಜಗದೀಶ್ ಶೆಟ್ಟರ್ ಗರಂ ಆದರು. ಪಾಲಿಕೆ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಶೇ.70ರಷ್ಟು ಅನುದಾನವನ್ನು ಸರ್ಕಾರವೇ ನೀಡಬೇಕು ಎಂದು ಪಟ್ಟು ಹಿಡಿದರು.
ಇದನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ದೇಶಪಾಂಡೆ ಹೇಳಿದಾಗ ಮಾತಿನ ಚಕಮಕಿಗೆ ತೆರೆ ಬಿದ್ದಿತು.

Facebook Comments

Sri Raghav

Admin