ಇಂದಿನ ಪಂಚಾಗ ಮತ್ತು ರಾಶಿಫಲ (17.11.2018 – ಶನಿವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :ತಂದೆಯ ಮುಂದುಗಡೆ ನಿಂತಿದ್ದರೆ ಶೋಭಿಸುವಂತೆ, ಸಿಂಹಾಸನದಲ್ಲಿ ಕುಳಿತಿದ್ದರೆ ಶೋಭಿಸುವುದಿಲ್ಲ. ತಂದೆಯ ಪಾದಗಳನ್ನು ಒತ್ತುತ್ತಿರುವಾಗ ಉಂಟಾಗುವ ಸುಖವು ರಾಜ್ಯವನ್ನು ಆಳಿದರೆ ಬರುವುದಿಲ್ಲ. ತಂದೆಯು ಊಟ ಮಾಡಿದ ಮೇಲೆ ಊಟ ಮಾಡುವುದರಲ್ಲಿರುವ ತೃಪ್ತಿಯು ಮೂರು ಲೋಕಗಳನ್ನು ಆಳಿದರೂ ಬರುವು ದಿಲ್ಲ. ತಂದೆಯನ್ನು ಬಿಟ್ಟವನಿಗೆ ರಾಜ್ಯವು ಹೊರೆಯೇ ಹೊರತು ಅದರಲ್ಲಿ ಯಾವ ಗುಣವೂ ಇಲ್ಲ.
-ನಾಗಾನಂದ

Rashi-Bhavishya--01

# ಪಂಚಾಂಗ : ಶನಿವಾರ, 17.11.2018
ಸೂರ್ಯ ಉದಯ ಬೆ.06.19 / ಸೂರ್ಯ ಅಸ್ತ ಸಂ.05.50
ಚಂದ್ರ ಉದಯ ಮ.01.50 / ಚಂದ್ರ ಅಸ್ತ ರಾ,.01.54
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ
ಶುಕ್ಲ ಪಕ್ಷ / ತಿಥಿ : ನವಮಿ (ಬೆ.11.55)
ನಕ್ಷತ್ರ:  ಶತಭಿಷಾ (ಮ.02.26) / ಯೋಗ: ವ್ಯಾಘಾತ (ಸಾ.06.59)
ಕರಣ: ಕೌಲವ-ತೈತಿಲ (ಬೆ.11.55-ರಾ.12.49)
ಮಳೆ ನಕ್ಷತ್ರ: ವಿಶಾಖ   / ಮಾಸ: ವೃಶ್ಚಿಕ / ತೇದಿ: 02

Rashi-Bhavishya--01# ರಾಶಿ ಭವಿಷ್ಯ 
ಮೇಷ : ನಿಮ್ಮಿಂದ ಆದ ತಪ್ಪುಗಳು ಏನು ಎಂಬುದರ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಿ
ವೃಷಭ : ಮಗನ ಸಲುವಾಗಿ ನಡೆಸಿದ ಪೂಜೆ ಫಲ ಕೊಡುವ ಸಾಧ್ಯತೆ ಇದೆ. ಪ್ರಯಾಣದಲ್ಲಿ ಎಚ್ಚರವಿರಲಿ
ಮಿಥುನ: ಎಲೆಕ್ಟ್ರಾನಿಕ್ಸ್ ವ್ಯಾಪಾರದಲ್ಲಿ ಲಾಭಾಂಶ ಅಧಿಕವಾಗುವುದು. ವಿದ್ಯಾರ್ಥಿಗಳಿಗೆ ಶುಭ ದಿನ
ಕಟಕ : ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ ಕಂಡುಬರುವುದಿಲ್ಲ
ಸಿಂಹ: ವಿಶಾಲ ಮನೋ ಭಾವದವರೊಡನೆ ಬೆರೆಯಿರಿ
ಕನ್ಯಾ: ಹಣಕಾಸಿನ ಕೊರತೆ ಹೆಚ್ಚಾಗಿ ಇರುವುದಿಲ್ಲ
ತುಲಾ: ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ಸಮಸ್ಯೆ ಎದುರಿಸಬೇಕಾಗುವುದು
ವೃಶ್ಚಿಕ: ಉನ್ನತ ಹುದ್ದೆಗೆ ಮೊದಲ ಮೆಟ್ಟಿಲು ಏರುವಿರಿ. ಉತ್ತಮ ದಿನ
ಧನುಸ್ಸು: ತಾಳ್ಮೆಯಿಂದ ಕೆಲಸ ನಿರ್ವಹಿಸಿದರೆ ತೊಂದರೆಗಳು ತಾನಾಗಿಯೇ ಬಗೆಹರಿಯಲಿವೆ
ಮಕರ: ಹೊಸ ಜವಾಬ್ದಾರಿ ಹೊಂದಲಿದ್ದೀರಿ
ಕುಂಭ: ಕೆಲಸ-ಕಾರ್ಯಗಳು ಪೂರ್ಣಗೊಳ್ಳುವವು
ಮೀನ: ದೂರ ಪ್ರಯಾಣ ಮಾಡುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments