ಅಣ್ಣಗೇರಿ ಬಳಿ ಲಾರಿ- ಬಸ್ ನಡುವೆ ಭೀಕರ ರಸ್ತೆ ಅಪಘಾತ, ಮುಂಬೈನ 6 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Lorry-Accidnet--01

ಧಾರವಾಡ, ನ.17-ಲಾರಿ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮುಂಬೈ ಮೂಲದ ಆರು ಮಂದಿ ಸಾವನ್ನಪ್ಪಿರುವ ಘಟನೆ ಅಣ್ಣಗೇರಿ ಪೊಲೀಸ್‍ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮುಂಬೈ ಮೂಲದ ವಿಶ್ವನಾಥ್ (75), ದಿನಕರ್(74), ರಮೇಶ್ ಜಯಪಾಲ್ (70), ಸುಮೇಧ(65), ಲಾಹೂ (65), ಸುಚಿತ್ರ (65) ಸಾವನ್ನಪ್ಪಿರುವ ದುರ್ದೈವಿಗಳು.

ಬೆಂಗಳೂರು ಮೂಲದ ಕಾತ್ಯಾಯಿನಿ ಟ್ರಾವೆಲ್ಸ್‍ನ ಬಸ್‍ನಲ್ಲಿ ಕರ್ನಾಟಕ ಪ್ರವಾಸಕ್ಕೆ ಬರುತ್ತಿದ್ದಾಗ ಧಾರವಾಡದ ಅಣ್ಣಗೇರಿಯ ಭದ್ರಾಪುರ ಬಳಿ ಲಾರಿಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂದು ವಾರದ ಹಿಂದೆ ಮುಂಬೈಯಿಂದ ಹಂಪಿಗೆ ಹೊರಟಿದ್ದ ಈ ತಂಡ ನಿನ್ನೆ ರಾತ್ರಿ ಹುಬ್ಬಳ್ಳಿಯಿಂದ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಈ ಬಗ್ಗೆ ವಿಷಯ ತಿಳಿದ ಅಣ್ಣಗೇರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Dharwad Accidnet  1

Dharwad Accidnet  2

Dharwad Accidnet  3

Dharwad Accidnet  4

Dharwad-Accidnet--5

Dharwad-Accidnet--6

 

Facebook Comments

Sri Raghav

Admin