ಶೀಲ ಶಂಕಿಸಿ ಸಿಲಿಂಡರ್ ಎತ್ತಿ ಹಾಕಿ ಪತ್ನಿ ಕೊಂದ ಪತಿ

ಈ ಸುದ್ದಿಯನ್ನು ಶೇರ್ ಮಾಡಿ

Murder-n-01ಶಿವಮೊಗ್ಗ, ನ.17-ಶೀಲ ಶಂಕಿಸಿದ ಪತಿ ರಾತ್ರಿ ಪತ್ನಿಯ ಮೇಲೆ ಸಿಲಿಂಡರ್ ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ವಿನೋಬಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಿವಮೊಗ್ಗ ಹೊರವಲಯದ ಬೊಮ್ಮನಕಟ್ಟೆ ನಿವಾಸಿ ಮಾಲಾ (26) ಕೊಲೆಯಾದ ಗೃಹಿಣಿ.  ಬೊಮ್ಮನಕಟ್ಟೆಯಲ್ಲಿ ಮಂಜುನಾಥ್ ಹಾಗೂ ಮಾಲಾ ದಂಪತಿ ವಾಸವಾಗಿದ್ದು, ಪತ್ನಿ ಮೇಲೆ ಶಂಕೆ ವ್ಯಕ್ತಪಡಿಸಿ ಆಗಾಗ್ಗೆ ಜಗಳವಾಡುತ್ತಿದ್ದರು ಎನ್ನಲಾಗಿದೆ. ರಾತ್ರಿ ಪತ್ನಿ ಮಾಲಾ ಮಲಗಿದ್ದಾಗ ಸಿಲಿಂಡರನ್ನು ಎತ್ತಿ ಹಾಕಿ ಕೊಲೆ ಮಾಡಿ ನಂತರ ದೊಡ್ಡಪೇಟೆ ಠಾಣೆಗೆ ಹೋಗಿ ಮಂಜುನಾಥ್ ಶರಣಾಗಿದ್ದಾನೆ.  ಸುದ್ದಿ ತಿಳಿದ ವಿನೋಬಾನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಶವವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )