ತುಮಕೂರಿನ 10 ತಾಲೂಕುಗಳಲ್ಲಿ ಬರ ಕೇಂದ್ರ ಬರ ಅಧ್ಯಯನ ತಂಡದಿಂದ ಪರಿಶೀಲನೆ

ಈ ಸುದ್ದಿಯನ್ನು ಶೇರ್ ಮಾಡಿ

Tumakuru--01

– ಸಿ.ಎಸ್. ಕುಮಾರ್ ಚೇಳೂರು
ತುಮಕೂರು, ನ.18- ಜಿಲ್ಲೆಯ 10 ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರದ ಬರ ಅಧ್ಯಯನ ತಂಡದ ನಾಲ್ವರು ಅಧಿಕಾರಿಗಳು ಇಂದು ಜಿಲ್ಲೆಗೆ ಆಗಮಿಸಿ ಕೂರಟಗೆರೆ , ಮಧುಗಿರಿ ಹಾಗೂ ಪಾವಗಡ ತಾಲೂಕುಗಳ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶ ಉಂಟಾಗಿದುದ, ವೇವು ಮತ್ತು ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಈ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳಲು ಅಧಿಕಾರಿಗಳು ಒಂದು ವಾರದಿಂದ ರೂಟ್ ಮ್ಯಾಪ್ ಸಿದ್ಧಪಡಿಸಿದ್ದುರ. ಅದರಂತೆ ಇಂದು ಕೇಂದ್ರ ತಂಡ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಕೇಂದ್ರ ತಂಡದ ಮುಖ್ಯಸ್ಥ ಮಾನಸ್ ಚೌಧುರಿ ಮಾತನಾಡಿ, ಈಗಾಗಲೇ ತುಮಕೂರು ಜಿಲ್ಲಾಧಿಕಾರಿಗಳ ಜೂತೆ ಸಮಗ್ರವಾಗಿ ಚರ್ಚೆ ನಡೆಸಲಾಗಿದೆ. ಜಿಲ್ಲಾಧಿಕಾರಿಗಳಾದ ರಾಕೇಶ್ ಕುಮಾರ್ ಅವರು ನೀಡಿರುವ ವರದಿಯನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ರೈತರು ಎದುರಿಸುತ್ತಿರುವ ಸಮಸ್ಯೆಗಳು ಖುದ್ದು ನೋಡಿದ್ದೇವೆ. ಇದಲ್ಲದೆ ಇಲ್ಲಿನ ಸ್ಥಳೀಯ ಶಾಸಕರು ಹಾಗೂ ರೈತರು ನಡುವೆ ಚರ್ಚೆಗಳು ನೆಡೆಸಿದ್ದೇವೆ ಎಂದು ತಿಳಿಸಿದರು.
ರೈತರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳು ನಮಗೆ ತಿಳಿದಿವೆ. ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿನ ಕೊರತೆ ಇರುವುದು ಕೂಡ ನಮ್ಮ ಗಮನಕ್ಕೆ ಬಂದಿದೆ. ಪರಿಶೀಲನೆ ಬಳಿಕ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಕೂರಟಗೆರೆ ತಾಲೂಕಿನ ರಾಯವಾರ ಗ್ರಾಮದಲ್ಲಿ ಇರುವ ರಾಮಚಂದ್ರಪ್ಪ ಎಂಬುವವರ ಜಮೀನು ನಲ್ಲಿ ಬೆಳೆದಿರುವ ಮುಸುಕಿನ ಜೋಳ,ರಾಗಿ ಬೆಳೆಯನ್ನು ವೀಕ್ಷಣೆ ಮಾಡಿ ಅಧಿಕಾರಿಗಳು ರೈತರಿಂದ ಮಾಹಿತಿ ಪಡೆದರು.  ಅಲ್ಲದೆ ತಾಲೂಕಿನ ಹಲವಾರು ರೈತರಿಂದ ಮಾಹಿತಿ ಸಂಗ್ರಹಿಸಿದ ಅದಿಕಾರಿಗಳು ತಂಡ ಮಧುಗಿರಿ ತಾಲೂಕು ಪ್ರಯಾಣ ಬೆಳೆಸಿದರು. ಇದರ ನಡುವೆ ಕೂರಟಗೆರೆ ಹಾಗೂ ಮಧುಗಿರಿ ತಾಲೂಕಿನ ಮಾರ್ಗದಲ್ಲಿ ರೈತರು ಸಾಲುಗಟ್ಟಿ ನಿಂತು ನಮ್ಮ ನೆರವಿಗೆ ಕೊಡಲೇ ಧಾವಿಸಿ ಸಮಸ್ಯೆಗಳನ್ನು ಆಲಿಸಿ ಎಂದು ಮನವಿ ಮಾಡುತ್ತಿದ್ದರು. ಮಧುಗಿರಿ ತಾಲೂಕು ಶಾಸಕರಾದ ವೀರಭದ್ರಪ್ಪ ಅವರು ಬರ ಅಧ್ಯಯನ ತಂಡವನ್ನು ಬರ ಮಾಡಿ ಕೊಂಡರು ನಂತರ ಮಧುಗಿರಿ ತಾಲೂಕು ಬಸವನಹಳ್ಳಿ ಹಾಗೂ ಚನ್ನೇನಹಳ್ಳಿ ,ಮಲ್ಲೆಕಾವು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಪಾವಗಡ ತಾಲೂಕಿನ ವೆಂಕಟಪುರಾ, ದಾಮುತಾ ಮುರಿ,ಪಾವಗಡ ನಗರ,ಅಗಸರ ಗುಂಟೆ,ಕೆಂಚಮನಹಳ್ಳಿ ಸೇರಿದಂತೆ ಇತರೆ ಕಡೇ ಭೇಟಿ ಮಾಡಿ ಪರಿಶೀಲನೆ ನಡೆಸಿದರು.  ಕೇಂದ್ರ ಸರ್ಕಾರದಿಂದ ಬಂದಿರುವ ಅಧಿಕಾರಿಗಳ ತಂಡದಿಂದ ಭಾರಿ ನಿರೀಕ್ಷೆ ಇಟ್ಟುಕೊಂಡಿರುವ ರೈತರು ತಮ್ಮ ಅಹವಾಲು ಹೇಳಿಕೊಂಡರು. ಕಾರ್ಮಿಕ ಸಚಿವ ವೆಂಕಟರಮಣಪ್ಪ ಕೂಡ ಅಧಿಕಾರಿಗಳು ಜತೆ ಚರ್ಚೆ ನಡೆಸಿದ್ದಾರೆ. ಅಧಿಕಾರಿಗಳು ಪ್ರವಾಸ ಮುಗಿಸಿ ದೆಹಲಿಗೆ ತೆರಳಿ ವರದಿ ನೀಡುತ್ತಾರೆ. ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ ಪರಿಹಾರ ನೀಡುಲಾಗುತ್ತದೆ ಎಂದು ತಿಳಿಸಿದರು.  ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ರಾಕೇಶ್ ಕುಮಾರ್,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಸ್ ಕಣ್ಮಣಿ ಜಾಯ್, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ತಹಶೀಲ್ದಾರ್,ತಾಲೂಕಿನ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಜನ ಪ್ರತಿನಿಧಿಗಳು ರೈತರು ಬಾಗವಹಿಸಿದ್ದರು.

Facebook Comments

Sri Raghav

Admin