ಅಕ್ರಮ ಸಂಬಂಧದ ವಿಚಾರಕ್ಕೆ ಜಗಳ, ಮೂವರಿಗೆ ಚಾಕು ಇರಿತ, ಮಹಿಳೆ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Sex--Murder--01ಬೆಂಗಳೂರು, ನ.18- ಅಕ್ರಮ ಸಂಬಂಧ ವಿಚಾರಕ್ಕೆ ಜಗಳ ತೆಗೆದ ವ್ಯಕ್ತಿಯೊಬ್ಬ ಒಂದೇ ಕುಟುಂಬದ ಮೂವರಿಗೆ ಚಾಕು ಇರಿದ ಪರಿಣಾಮ ಮಹಿಳೆಯೊಬ್ಬರು ತೀವ್ರ ಗಾಯಗೊಂಡು ಸಾವನ್ನಪ್ಪಿರುವ ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ನಡೆದಿದೆ. ಸಾವಿತ್ರಮ್ಮ (47) ಚಾಕು ಇರಿತಕ್ಕೊಳಗಾಗಿ ಸಾವನ್ನಪ್ಪಿರುವ ಮಹಿಳೆ. ಸಾವಿತ್ರಮ್ಮ ಅವರ ಮಗ ಭರತ್ ಹಾಗೂ ಗಂಡ ಸಣ್ಣಪ್ಪಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಾಕು ಇರಿದ ಆರೋಪಿ ಆನಂದ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ; ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಆನಂದ್ ನ ಪತ್ನಿಗೂ ಆಟೋ ಚಾಲಕ ಭರತ್‍ಗೂ ಅಕ್ರಮ ಸಂಬಂಧ ಇತ್ತು ಎಂದು ಹೇಳಲಾಗಿದೆ. ಇದೇ ವಿಷಯದಲ್ಲಿ ಆನಂದ್‍ಗೂ ಪತ್ನಿಗೂ ನಿತ್ಯ ಜಗಳವಾಗುತ್ತಿತ್ತು. ನಿನ್ನೆ ರಾತ್ರಿ ಈ ವಿಷಯವನ್ನು ಮುಂದಿಟ್ಟು ಆನಂದ್, ಪತ್ನಿಯೊಂದಿಗೆ ಜಗಳ ಆರಂಭಿಸಿದ್ದಾನೆ. ಆಗ ಆತನ ಪತ್ನಿ ಭರತ್‍ಗೆ ಕರೆ ಮಾಡಿ ಅಲ್ಲಿಗೆ ಕರೆಸಿಕೊಂಡಿದ್ದಾಳೆ. ಭರತ್ ತನ್ನ ತಂದೆ, ಸಣ್ಣಪ್ಪ ಹಾಗೂ ತಾಯಿ ಸಾವಿತ್ರಮ್ಮ ಅವರೊಂದಿಗೆ ಸ್ಥಳಕ್ಕೆ ಬಂದಿದ್ದಾರೆ.

ಇದರಿಂದ ರೊಚ್ಚಿಗೆದ್ದ ಆನಂದ್ ಚಾಕುವಿನಿಂದ ಮೊದಲು ಸಾವಿತ್ರಮ್ಮ ಅವರ ಎದೆಗೆ ಇರಿದಿದ್ದಾನೆ. ತಡೆಯಲು ಬಂದ ಭರತ್ ಹಾಗೂ ಸಣ್ಣಪ್ಪ ಅವರ ಕೈ, ಬೆನ್ನಿಗೆ ಇರಿದಿದ್ದಾನೆ.  ತೀವ್ರ ಗಾಯಗೊಂಡ ಸಾವಿತ್ರಮ್ಮ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿಲಾಯಿತಾದರೂ ಅವರು ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಭರತ್ ಮತ್ತು ಸಣ್ಣಪ್ಪ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳಕ್ಕೆ ಬಂದ ಕೊತ್ತನೂರು ಠಾಣೆ ಪೊಲೀಸರು ಆರೋಪಿ ಆನಂದ್‍ನನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments