ಸಾವಿನಲ್ಲೂ ಸಾರ್ಥಕತೆ ಮೆರೆದ ವಾಟಾಳ್ ಪಕ್ಷದ ಕಾರ್ಯಕರ್ತ

ಈ ಸುದ್ದಿಯನ್ನು ಶೇರ್ ಮಾಡಿ

SANDIPEಬೆಂಗಳೂರು, ನ.18- ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟ ಕನ್ನಡ ಚಳವಳಿ ವಾಟಾಳ್ ಪಕ್ಷದ ಕಾರ್ಯಕರ್ತರಾದ ಸಂದೀಪ್ ಅವರ ವಿವಿಧ ಅಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಸಂದೀಪ್ ಅವರು ಯಶವಂತಪುರದಲ್ಲಿರುವ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ನಿಧನ ಹೊಂದಿದ್ದು, ಅವರಿಗೆ ಕೇವಲ 30 ವರ್ಷ ವಯಸ್ಸಾಗಿತ್ತು.

ಕುಟುಂಬ ವರ್ಗದವರು ಸಂದೀಪ್ ಅವರ ಹೃದಯ, ಕಿಡ್ನಿ, ಲಿವರ್, ಕಣ್ಣುಗಳನ್ನು ದಾನ ಮಾಡುವ ಮೂಲಕ ದುಃಖದಲ್ಲೂ ಇತರರಿಗೆ ನೆರವಾಗಿದ್ದಾರೆ.  ಇಂದು ಬೆಳಗ್ಗೆ 9 ಗಂಟೆಗೆ ಜೀವಂತ ಹೃದಯವನ್ನು ಚೆನ್ನೈಗೆ ಸಾಗಿಸಲಾಯಿತು. ಮಧ್ಯಾಹ್ನ 3 ಗಂಟೆಗೆ ಹರಿಶ್ಚಂದ್ರ ಘಾಟ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕನ್ನಡ ಚಳವಳಿ ಮುಖಂಡ ಕಾರ್ ನಾಗೇಶ್, ಚಾಮರಾಜನಗರ ಅವರ ಭಾಮೈದುನನಾಗಿದ್ದ ಸಂದೀಪ್ ಅವರ ಅಂತಿಮ ದರ್ಶನವನ್ನು ಕಾರ್ಯಕರ್ತರು ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.

Facebook Comments