ಹೊಸೂರು ಬಳಿ ನಿಂತಿದ್ದ ಲಾರಿಗೆ ಗುದ್ದಿದ ಆಂಬುಲೆನ್ಸ್, ಸ್ಥಳದಲ್ಲೇ ನಾಲ್ವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident

ಆನೇಕಲ್, ನ.18- ನಿಂತಿದ್ದ ಲಾರಿಗೆ ಆಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ರೋಗಿ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಮಿಳುನಾಡು ರಸ್ತೆಯ ಹೊಸೂರು ಬಳಿ ಇಂದು ಮುಂಜಾನೆ ನಡೆದಿದೆ. ಆಂಬುಲೆನ್ಸ್ ಚಾಲಕ ಜೈಸೂರ್ಯ, ಆಂಬುಲೆನ್ಸ್ ಸಹಾಯಕ ಮದನ್ ಕುಮಾರ್ ಹಾಗೂ ಇಬ್ಬರು ರೋಗಿಗಳು ಮೃತಪಟ್ಟವರು.

ಎಚ್1ಎನ್1 ಜ್ವರಕ್ಕೆ ಚಿಕಿತ್ಸೆಗಾಗಿ ತಿರುಚಿಯಿಂದ ಬೆಂಗಳೂರು ಆಸ್ಪತ್ರೆಯೊಂದಕ್ಕೆ ಇಬ್ಬರು ರೋಗಿಗಳನ್ನು ಕರೆ ತರಲಾಗುತ್ತಿತ್ತು. ಈ ವೇಳೆ ಹೊಸೂರು-ಕೃಷ್ಣಗಿರಿ ರಾಷ್ಟ್ರೀಯ ಹೆದ್ದಾರಿಯ ಸೀತರಾಮನಗರ ಬಳಿ ಮುಂಜಾನೆ 3.30ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿದ ಆಂಬುಲೆನ್ಸ್ ನೇರವಾಗಿ ಡೀಸೆಲ್ ಖಾಲಿಯಾಗಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

Accident-01

ಡಿಕ್ಕಿಯ ರಭಸಕ್ಕೆ ಆಂಬುಲೆನ್ಸ್ ಸಂಪೂರ್ಣ ನಜ್ಜುಗುಜ್ಜಗಾಗಿದ್ದು, ಕ್ರೇನ್ ಮೂಲಕ ಆಂಬುಲೆನ್ಸ್ ಅನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.ಅತಿಯಾದ ಮಂಜು ಕವಿದಿತ್ತು. ಚಾಲಕನಿಗೆ ಮುಂದೆ ನಿಂತಿದ್ದ ಲಾರಿ ಕಾಣದೆ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿದ ತಕ್ಷಣ ಹೊಸೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಶವಗಳನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಈ ಬಗ್ಗೆ ಹೊಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin