ಇಬ್ಬರು ನಾಗರಿಕರನ್ನು ಅಪಹರಿಸಿ ಹತ್ಯೆ ಮಾಡಿದ ಉಗ್ರರು

ಈ ಸುದ್ದಿಯನ್ನು ಶೇರ್ ಮಾಡಿ

policcccccceamyಶ್ರೀನಗರ, ನ.18- ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮತ್ತೆ ಮುಂದುವರೆದಿದ್ದು, ಕೇವಲ 48 ಗಂಟೆಗಳ ಅವಧಿಯಲ್ಲಿ ಇಬ್ಬರು ನಾಗರಿಕರನ್ನು ಅಪಹರಣ ಮಾಡಿ ಹತ್ಯೆಗೈದ್ದಾರೆ. ಶುಕ್ರವಾರವಷ್ಟೇ ಪುಲ್ವಾಮದಲ್ಲಿ ಓರ್ವನ ಅಪಹರಣ ಮಾಡಿ ಹತ್ಯೆಗೈದಿದ್ದ ಉಗ್ರರಿಂದ ಮತ್ತೊಮ್ಮೆ ಅಂತಹುದೇ ಕೃತ್ಯ ನಡೆದಿದ್ದು, ಇಂದು ಶೋಪಿಯಾನ್‍ನಲ್ಲಿ ಕೇವಲ 19 ವರ್ಷದ ಯುವಕನನ್ನು ಅಪಹರಿಸಿ ಕತ್ತು ಸೀಳಿ ಕೊಂದು ಹಾಕಿದ್ದಾರೆ.

ಮೂಲಗಳ ಪ್ರಕಾರ, ಈ ಇಬ್ಬರೂ ಸೇನೆಗೆ ಉಗ್ರರ ಬಗ್ಗೆ ಮಾಹಿತಿ ನೀಡುತ್ತಿದ್ದರು ಎಂಬ ಶಂಕೆಯ ಮೇರೆಗೆ ಉಗ್ರರು ಇವರನ್ನುಕೊಂದು ಹಾಕಿದ್ದಾರೆ. ಅಲ್ಲದೆ ಸೇನೆಗೆ ನೆರವು ನೀಡುವ ಅಥವಾ ಸೇನೆಗೆ ಮಾಹಿತಿ ನೀಡುವ ಎಲ್ಲರನ್ನೂ ಕೊಂದು ಹಾಕುವುದಾಗಿ ಉಗ್ರರು ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.
ಮೃತನನ್ನು 19 ವರ್ಷದ ಹುಜೈಫ್ ಅಶ್ರಫ್ ಎಂದು ಗುರುತಿಸಲಾಗಿದ್ದು, ಈತ ಕುಲಗಾಮ್ ನ ಮಂಜಗಾಮ್ ಪ್ರದೇಶದ ನಿವಾಸಿ ಎಂದು ಹೇಳಲಾಗಿದೆ.
ಶುಕ್ರವಾರ ಪುಲ್ವಾಮ ಜಿಲ್ಲಾಯ ಸೈದಾಪೋರಾದಲ್ಲಿ ನದೀಮ್ ಮಂಜೂರ್ ಎಂಬಾತನನ್ನು ಆತನ ಮನೆಯಿಂದಲೇ ಅಪಹರಣ ಮಾಡಿದ್ದ ಉಗ್ರರು ಆತನನ್ನು ಭೀಕರವಾಗಿ ಕೊಂದು ಹಾಕಿದ್ದರು.

Facebook Comments