‘ಸದ್ಯದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗುತ್ತೆ, ಅನುಮಾನ ಬೇಡ’

ಈ ಸುದ್ದಿಯನ್ನು ಶೇರ್ ಮಾಡಿ

sidaramayaಹುಬ್ಬಳ್ಳಿ,ನ,18- ಸಚಿವ ಸಂಪುಟ ವಿಸ್ತರಣೆ ಸದ್ಯದಲ್ಲೇ ಆಗುತ್ತದೆ. ಇದರಲ್ಲಿ ಅನುಮಾನ ಬೇಡ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಅನಿವಾರ್ಯ ಕಾರಣಗಳಿಂದ ಸಂಪುಟ ವಿಸ್ತರಣೆ ಮಾಡಲು ಆಗಿಲ್ಲ. ಶೀಘ್ರವೇ ವಿಸ್ತರಣೆ ಮಾಡಲಾಗುತ್ತದೆ ಎಂದರು.  ಇಂದಿರಾ ಕ್ಯಾಂಟಿನ್‍ನಿಂದ ಕಾಂಗ್ರೆಸ್‍ಗೆ ಒಳ್ಳೆಯ ಹೆಸರು ಬಂದು ಬಿಡುತ್ತದೆ ಎಂದು ಬಿಜೆಪಿಯವರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಇದೇ ವೇಳೆ ಜಿ. ಪರಮೇಶ್ವರ ಮುಖ್ಯಮಂತ್ರಿ ಆಗುವ ತಮ್ಮ ಆಸೆಯನ್ನು ಹೇಳಿಕೊಂಡಿದ್ದಾರೆ. ಆದರೆ ಕಾಂಗ್ರೆಸ್‍ನಲ್ಲಿ ಅದಕ್ಕಾಗಿ ಅರ್ಹ ಆಕಾಂಕ್ಷಿಗಳು ಸಾಕಷ್ಟು ಜನ ಇದ್ದಾರೆ. ಹಾಗಾಗಿ ನೋಡೋಣ ಎಂದರು. ನೆಹರು ಅವರನ್ನು ಹಿಟ್ಲರ್ ಎಂದು ಕರೆಯುವ ಆರ್‍ಎಸ್‍ಎಸ್‍ನವರು ಪ್ಯಾಸಿಸ್ಟ್ ಮನೊಬಾವನೆ ಉಳ್ಳವರು ಎಂದು ಕಿಡಿಕಾರಿದ ಸಿದ್ದರಾಮಯ್ಯಾ ಬಿಜೆಪಿಯವರು ಹಿಟ್ಲರನಂತೆ ಆಡಳಿತ ನಡೆಸುತ್ತಿದ್ದಾರೆ. ಅವರು ಹಿಟ್ಲರ್ ವಂಶಸ್ಥರು ಎಂದು ಆರೋಪಿಸಿದರು.

Facebook Comments