ಕೇರಳದಲ್ಲಿ ಹೆದ್ದಾರಿ ಬಂದ್

ಈ ಸುದ್ದಿಯನ್ನು ಶೇರ್ ಮಾಡಿ

KERALAಪಂಪಾ(ಪಿಟಿಐ), ನ.18- ಶಬರಿಮಲೆ ಅಯ್ಯಪ್ಪ ದೇಗುಲದತ್ತ ತೆರಳುತ್ತಿದ್ದ ಬಿಜೆಪಿ ನಾಯಕರನ್ನು ಬಂಧಿಸಿರುವುದನ್ನು ಖಂಡಿಸಿ ಬಿಜೆಪಿ ಯು ಕೇರಳದಲ್ಲಿ ಇಂದು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದೆ. ಕೇರಳದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್ ಹಾಗೂ ಅವರ ಪಕ್ಷದ ಕಾರ್ಯಕರ್ತರನ್ನು ನೀಲಕ್ಕಲ್ ಮೂಲ ಶಿಬಿರದ ಬಳಿ ತಡೆದಿರುವ ಪೊ ಲೀಸರು ವಾಪಾಸು ತೆರಳುವಂತೆ ಸೂಚಿಸಿದ್ದಾರೆ. ಸುರೇಂದ್ರನ್ ವಾಪಸಾಗಲು ನಿರಾಕರಿಸಿದ ಕಾರಣ ಪೊ ಲೀಸ್ ವಾಹನದಲ್ಲಿ ಕರೆದೊಯ್ಯಲಾಯಿತು. ಮುಂಜಗೃತಾ ಕ್ರಮವಾಗಿ ಪೊ ಲೀಸರು ಪೊ ಲೀಸರು ನಿನ್ನೆ ಅಯ್ಯಪ್ಪ ದೇಗುಲಕ್ಕೆ ಆಗಮಿಸುತ್ತಿದ್ದ ಕೆಲವು ಬಿಜೆಪಿ ನಾಯಕರನ್ನು ತಡೆದಿದ್ದರು. ಇದನ್ನು ಖಂಡಿಸಿ ಬಿಜೆಪಿಯವರು ಇಂದು ಹೆದ್ದಾರಿ ಬಂದ್ ಮಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments