ಮುಂಬರಿವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 303 ಸ್ಥಾನ ಗೆಲ್ಲುತ್ತೆ : ಗೋಯಲ್ ಸಮೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Piyush Goyalಮುಂಬೈ, ನ.18- ಮುಂಬರುವ ಲೋಕಸಭಾ ಚುನಾವಣೆಯ ಕುರಿತಾಗಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಬೃಹತ್ ಸಮೀಕ್ಷೆಯೊಂದನ್ನು ಮಾಡಿಸಿದ್ದು, ಬಿಜೆಪಿಗೆ 297 ರಿಂದ 303 ಸ್ಥಾನಗಳು ಲಭ್ಯವಾಗಲಿದೆ ಎಂದು ಸಮೀಕ್ಷಾ ವರದಿ ಹೇಳಿದೆ. 2013ರಲ್ಲಿ ಗೋಯಲ್ ಇದೇ ರೀತಿಯ ಸರ್ವೆ ಮಾಡಿಸಿದ್ದರು. ಆಗ ಬಿಜೆಪಿಗೆ ಸ್ಪಷ್ಟ ಬಹುಮತ ದೊರಕುತ್ತದೆ ಎಂದು ಹೇಳಿದ್ದರು. ಅಂದು ಆ ಸಮೀಕ್ಷೆ ನಿಜವಾಗಿತ್ತು.  ದೇಶಾದ್ಯಂತ 5.4 ಲಕ್ಷ ಮತದಾರರ ಅಭಿಪ್ರಾಯ ಆಧರಿಸಿದ ದೊಡ್ಡ ಸಮೀಕ್ಷೆಯಲ್ಲಿ ಈ ಅಂಶ ತಿಳಿದು ಬಂದಿದೆ ಎಂದು ಗೋಯಲ್ ಹೇಳಿದ್ದಾರೆ.  ಈ ಸರ್ವೇಯನ್ನು ಬಿಜೆಪಿ ಮಾಡದೇ ಖಾಸಗಿ ಸಂಸ್ಥೆಯೊಂದರ ಮೂಲಕ ಮಾಧ್ಯಮಗಳನ್ನು ಬಳಸಿಕೊಂಡು ಮಾಡಿಸಲಾಗಿದೆ.

Facebook Comments