‘ಮಾಜಿ ಲವರ್’ಗಾಗಿ ರೇಪ್ ಕೇಸ್ ಹಾಕ್ತಾರೆ ಮಹಿಳೆಯರು’ : ಹರಿಯಾಣ ಸಿಎಂ ವಿವಾದಾತ್ಮಕ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Manohar-Lal-Khattar

ಚಂಡಿಗಢ,ನ.18- ಅತ್ಯಾಚಾರ ವಿಚಾರಕ್ಕೆ ಸಂಬಂಧಿಸಿದಂತೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ನೀಡಿರುವ ಹೇಳಿಕೆ ಈಗ ಭಾರೀ ವಿವಾದ ಪಡೆದುಕೊಂಡಿದೆ. ಸಮಾರಂಭವೊಂದರಲ್ಲಿ ಅತ್ಯಾಚಾರ ವಿಷಯ ಕುರಿತು ಮಾತನಾಡಿದ್ದ ಕಟ್ಟರ್, ಪರಿತ್ಯಕ್ತ ಮಾಜಿ ಗೆಳೆಯನನ್ನು ಸೇರಲು ಕೆಲವು ಮಹಿಳೆಯರು ಅತ್ಯಾಚಾರ ಪ್ರಕರಣವನ್ನು ದಾಖಲಿಸುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಹಿಂದಿನಂತೆಯೇ ಅತ್ಯಾಚಾರಗಳು ಇಂದಿಗೂ ನಡೆಯುತ್ತಿವೆ. ದಾಖಲಾಗುತ್ತಿರುವ ಬಹುತೇಕ ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆ ಹಾಗೂ ಆರೋಪಿ ಪರಸ್ಪರ ಗೊತ್ತಿದ್ದವರೇ ಆಗಿರುತ್ತಾರೆ. ಶೇ. 80 ರಿಂದ 90ರಷ್ಟು ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಇಂಥವರಿಂದಲೇ ನಡೆಯುತ್ತಿದೆ. ಎಫ್‍ಐಆರ್ ದಾಖಲಿಸಿ ತಾನು ಅತ್ಯಾಚಾರಕ್ಕೀಡಾಗಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ ಎಂದು ಲಘುವಾಗಿ ಮಾತನಾಡಿದ್ದರು.

ಈ ಹೇಳಿಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ, ಖಟ್ಟರ್ ಖಂಡನಾರ್ಹ ಹೇಳಿಕೆ ನೀಡಿದ್ದಾರೆ. ಅತ್ಯಾಚಾರ ಹಾಗೂ ಸಾಮೂಹಿಕ ಅತ್ಯಾಚಾರವನ್ನು ತಡೆಯಲು ಸಂಪೂರ್ಣ ವಿಫಲವಾಗಿರುವ ಅವರು ಮಹಿಳೆಯರ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಕಟುವಾಗಿ ಟೀಕಿಸಿದ್ದಾರೆ.

Facebook Comments

Sri Raghav

Admin